ಮತಯಂತ್ರದೊಂದಿಗೆ ಮತಗಟ್ಟೆಗೆ ತೆರಳಿದ ಸಿಬ್ಬಂದಿ

ಚಿಕ್ಕನಾಯಕನಹಳ್ಳಿ

      ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ನಡೆಸಲು ಮತಗಟ್ಟೆ ಅಧಿಕಾರಿಗಳು, ಪೊಲೀಸರು, ಸಾರಿಗೆ ಸಿಬ್ಬಂದಿ ಎಲ್ಲರೂ ಸಿದ್ದರಾಗಿ ತಮ್ಮ ಮತಕೇಂದ್ರಗಳಿಗೆ ತೆರಳಿದ್ದಾರೆ. ಚುನಾವಣಾಧಿಕಾರಿಗಳು ಇವಿಎಂ ಮತ್ತು ವಿ.ವಿ.ಪ್ಯಾಟ್ ವಿದ್ಯುನ್ಮಾನ ಮತಯಂತ್ರಗಳನ್ನು ಚುನಾವಣಾ ಸಿಬ್ಬಂದಿಗೆ ನೀಡಿ ಮತದಾನಕ್ಕೆ ಅನುಕೂಲವಾಗುವಂತೆ ಸೂಕ್ತ ಸಲಹೆ, ಸೂಚನೆ ನೀಡಿ ಕಳಹಿಸಲಾಗಿದೆ.

       ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿ ತಮಗೆ ನಿಯೋಜಿಸಿದ ಮತಗಟ್ಟೆಗೆ ತೆರಳಲು ಚುನಾವಣಾ ಸಿಬ್ಬಂದಿ ವಿದ್ಯುನ್ಮಾನ ಮತಯಂತ್ರ, ಚುನಾವಣಾ ಸಲಕರಣೆಗಳು ಹಾಗೂ ತಮಗೆ ನಿಯೋಜಿಸಿರುವ ಮತಗಟ್ಟೆಯ ಮಾಹಿತಿಯನ್ನು ಚುನಾವಣಾ ಅಧಿಕಾರಿಗಳಿಂದ ಪಡೆದುಕೊಂಡರು. ಮತಯಂತ್ರಗಳನ್ನು ಪಡೆದ ಸಿಬ್ಬಂದಿ ಇವಿಎಂ ಮತ್ತು ವಿವಿ ಪ್ಯಾಟ್ ಮತಯಂತ್ರ ಮತ್ತಿತರೆ ಪರಿಕರಗಳನ್ನು ಪರಿಶೀಲಿಸಿಕೊಂಡು ತಮಗೆ ನಿಯೋಜಿಸಿದ ಮತಗಟ್ಟೆಗೆ ತೆರಳಿದರು.

ಮುಂಜಾಗ್ರತಾ ಕ್ರಮ

    ಮತಯಂತ್ರಗಳನ್ನು ಹೊತ್ತು ತರುವ ಬಸ್ಸುಗಳು ಚಿ.ನಾ.ಹಳ್ಳಿಯ ಪದವಿ ಪೂರ್ವ ಕಾಲೇಜಿನಲ್ಲಿ ಮತಯಂತ್ರಗಳನ್ನು ಒಟ್ಟುಗೂಡಿಸಿ ಸೂಕ್ತ ಬಂದೋಬಸ್ತಿನೊಂದಿಗೆ ಜಿಲ್ಲಾ ಕೇಂದ್ರಕ್ಕೆ ಸಾಗಿಸುವ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ.

ರಕ್ಷಣಾ ಸಿಬ್ಬಂದಿ :

   ಕ್ಷೇತ್ರದಲ್ಲಿ ಮತದಾನ ಶಾಂತಿಯುತವಾಗಿ ನಡೆಸಲು ಡಿವೈಎಸ್‍ಪಿ 1, ವೃತ್ತ ನಿರೀಕ್ಷಣಾಧಿಕಾರಿ 4, ಪಿಎಸ್‍ಐ 4, ಎಎಸ್‍ಐ 18, 84 ಮುಖ್ಯ ಪೊಲೀಸ್ ಕಾನ್ಸ್‍ಟೆಬಲ್, ಪೊಲೀಸ್ ಕಾನ್ಸ್‍ಟೆಬಲ್ ಮತ್ತು ಮಹಿಳಾ ಪೊಲೀಸ್ ಕಾನ್ಸ್‍ಟೆಬಲ್ ಒಟ್ಟು 181.
ಚುನಾವಣಾ ಸಿಬ್ಬಂದಿ : 1363 ಚುನಾವಣಾ ಸಿಬ್ಬಂದಿ, 43 ಚುನಾವಣೆಗೆ ಪಡೆದಿರುವ ಬಸ್ಸುಗಳು, 19 ಜೀಪು ಮತ್ತು ಟೆಂಪೋಟ್ರಾವೆಲರ್, ಚುನಾವಣಾ ಅಧಿಕಾರಿಗಳ ವಾಹನ 24 ಚುನಾವಣೆಗೆ ಬಳಸಿಕೊಳ್ಳಲಾಗಿದೆ.

    ಕ್ಷೇತ್ರದಲ್ಲಿ 262 ಮತಗಟ್ಟೆಗಳು : ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 262 ಮತಗಟ್ಟೆಗಳಿದ್ದು ಗ್ರಾಮೀಣ ಪ್ರದೇಶದಲ್ಲಿ 244 ಹಾಗೂ ಪಟ್ಟಣದ ಪ್ರದೇಶದಲ್ಲಿ 18 ಮತಗಟ್ಟೆಗಳಿವೆ.

     ಈ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,12,722 ಮತದಾರರಿದ್ದು ಪುರುಷ ಮತದಾರರು 1,06,516 ಹಾಗೂ ಮಹಿಳಾ ಮತದಾರರು 1,06,204 ಮತ್ತು ಇಬ್ಬರು ತೃತೀಯ ಲಿಂಗಿಗಳು, 3624 ವಿಕಲಚೇತನ ಮತದಾರಿದ್ದಾರೆ. ಕಸಬಾ ಗ್ರಾಮೀಣ ಪ್ರದೇಶದಲ್ಲಿ 15, ಪಟ್ಟಣದಲ್ಲಿ 22, ಹಂದನಕೆರೆ ಹೋಬಳಿ 48, ಶೆಟ್ಟಿಕೆರೆ ಹೋಬಳಿ 28, ಹುಳಿಯಾರು ಹೋಬಳಿ 75, ಕಂದಿಕೆರೆ ಹೋಬಳಿ 29, ಬುಕ್ಕಾಪಟ್ಟಣ ಹೋಬಳಿ 45 ಮತಗಟ್ಟೆಗಳಿವೆ.

      ತಾಲ್ಲೂಕಿನಲ್ಲಿ ಹಂದನಕೆರೆ ಹೋಬಳಿಯ ದೊಡ್ಡೆಣ್ಣೆಗೆರೆ, ಹುಳಿಯಾರು ಹೋಬಳಿಯ ಯಳನಡು ಹಾಗೂ ಕೆಂಕೆರೆಯಲ್ಲಿ ಚಕ್‍ಪೋಸ್ಟ್ ತೆರೆಯಲಾಗಿದ್ದು ಇಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಒಟ್ಟು 51 ಮತಗಟ್ಟೆಗಳನ್ನು ಕ್ರಿಟಿಕಲ್(ಸೂಕ್ಷ್ಮ) ಮತಗಟ್ಟೆ ಹಾಗೂ ಗೂಬೆಹಳ್ಳಿ, ಸಾಸಲು ಮತಗಟ್ಟೆಯನ್ನು ವಲ್ನರಬಲ್ (ಅತೀ ಸೂಕ್ಷ್ಮ) ಮತಗಟ್ಟೆ ಎಂದು ಗುರುತಿಸಲಾಗಿದೆ, ಕುಪ್ಪೂರು-205, ಕುಪ್ಪೂರು-206 ಮಾದರಿ ಮತಗಟ್ಟೆಗಳಾಗಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link