ತೋವಿನಕೆರೆ
ಗ್ರಾಮದ ದಿಗಂಬರ ಜೈನ ಜನಾಂಗದವರು ಭಗವಾನ್ ಮಹಾವೀರ ಸ್ವಾಮಿಯ ಜಯಂತಿಯನ್ನು ವ್ಯವಸ್ಥಿತವಾಗಿ ಅಚರಿಸಿದರು.
ಗ್ರಾಮದಲ್ಲಿರುವ ಶ್ರೀ ಚಂದ್ರನಾಥ ಸ್ವಾಮಿ ದೇವಾಲಯದ ಆವರಣದಿಂದ ಬುಧವಾರ ಬೆಳಗ್ಗೆ ಸ್ವಾಮಿಯ ಮೆರವಣಿಗೆ ಪ್ರಾರಂಭವಾಯಿತು. ಮೆರವಣಿಗೆ ಮುಗಿದ ನಂತರ ದೇವಾಲಯದಲ್ಲಿ ಅಭಿಷೇಕ ಸೇರಿದಂತೆ ಪೂಜಾ ಕಾರ್ಯಕ್ರಮಗಳು ನಡೆದವು. ಹಾಜರಿದ್ದ ಶ್ರಾವಕರಿಗೆ ಹೆಸರು ಬೇಳೆ ಪಾನಕವನ್ನು ವಿತರಿಸಲಾಯಿತು.ಗ್ರಾಮದ ವಿಮಲರಾಜು, ಟಿ.ಡಿ.ಬ್ರಹ್ಮರಾಜು, ಎಚ್.ಎನ್.ನಿತಿನ್ ಕುಮಾರ್, ಶ್ರೀತಳ, ಎಚ್.ಪಿ.ಮೋಹನಕುಮಾರ್, ಸುಗಂಧರಾಜು ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ