ತುಮಕೂರು
ಶಾಂತಿ ಅಹಿಂಸೆ ಸಾರುವ ಜೈನ ಸಮಾಜ ಮಾನವ ಕುಲಕ್ಕೆ ಕಿರೀಟವಿದ್ದಂತೆ, ಭಗವಾನ್ ಮಹಾವೀರರ ತತ್ವ ಸಿದ್ದಾಂತಗಳು ಇಂದಿನ ಪೀಳಿಗೆಗೆ ಅತಿ ಅಗತ್ಯವಾಗಿದೆ ಎಂದು ತುಮಕೂರು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ಅವರು ನಗರದ ಮಹಾವೀರ ಆಗಮ ಮಂದಿರದಲ್ಲಿ ಶ್ರೀ ಅಜಿತನಾಥ ಜೈನ ಶ್ವೇತಾಂಬರ ಮೂರ್ತಿ ಪೂಜಕ ಸಂಘದ ಆಶ್ರಯದಲ್ಲಿ ನಡೆದ ಭಗವಾನ್ ಶ್ರೀ ಮಹಾವೀರರ 2618 ನೇ ಜನ್ಮ ಕಲ್ಯಾಣೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಜೈನ ಸಮಾಜದ ಚಿಕ್ಕದಾದರು ಅವರ ತತ್ವ ಸಿದ್ದಾಂತಗಳು ಅಹಿಂಸ ಶಾಂತಿ ತತ್ವಗಳು ಅವರು ದೇಶಕ್ಕೆ ಸಮಾಜಕ್ಕೆ ನೀಡುವ ಕೊಡುಗೆಗಳು ಅವರ ಧರ್ಮ ನೀತಿ ಪಾಲನೆಗಳು ಮಾದರಿಯಾಗಿದೆ ಎಂದರು. ಬೆಳಗ್ಗೆ ಪಂಚಕಲ್ಯಾಣೋತ್ಸವ ಪೂಜೆ, ಮಹಾವೀರ ಸ್ವಾಮಿಯ ಭವ್ಯ ಮೆರವಣಿಗೆ ನಡೆಯಿತು. ಇದೇ ಸಂದರ್ಭದಲ್ಲಿ ಸಂಘದ ವಾರ್ಷಿಕ ವರದಿ ಮಂಡಿಸಲಾಯಿತು. ಕಾರ್ಯಕ್ರಮದಲ್ಲಿ ಭಾರತದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಜೈನ ಮಂದಿರಕ್ಕೆ ಭೇಟಿ ನೀಡಿ ಶ್ರೀ ಮಹಾವೀರಸ್ವಾಮಿಯ ಪೂಜಾ ಕಾರ್ಯದಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು.
ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷರಾದ ಮಾಂಗೀಲಾಲ್ ಜೈನ್, ಉಪಾಧ್ಯಕ್ಷರಾದ ಚಗನ್ಲಾಲ್ ಕಾರ್ಯದರ್ಶಿ ಪಾರಸ್ಲಲಿತ್, ಜೈನ್, ಕಾರ್ಯಗಳು ಸಾರಸಮಲ್ಜೈನ್, ಸಂಘದ ಹರೀಶ್ಜೈನ್ ಲಲಿತ್ ಜೈನ್ ಸಂಘದ ಪದಾಧಿಕಾರಿಗಳಾದ ಅಜಿತನಾಥ ಜೈನ ಮಹಿಳಾ ಸಂಘದ ಕಂಚನ್ಜೈನ್, ಆಶಾಜೈನ್, ಪಿಂಕಿಜೈನ್, ಸಂಘದ ಪದಾಧಿಕಾರಿಗಳು ಸದಸ್ಯರು, ಅತಿಥಿ ದೇವೋಭವದ ಸದಸ್ಯರು ,ಅರ್ಹಮ್ ಗ್ರೂಪ್ ಸದಸ್ಯರು, ವಧು ಮಂಡಲ್ ಸದಸ್ಯರು, ಅಜಿತನಾಥ ಜೈನ ಧಾರ್ಮಿಕ ಪಾಠಶಾಲಾ ವಿದ್ಯಾರ್ಥಿಗಳು ಸಂಗೀತ ಧರಮ್ ಚಂಧ ಚುನ್ನಿಲಾಲ್ ಪರಿವಾರದವರು ಜೈನ ಡೈರಕ್ಡರಿ ಬಿಡುಗಡೆಗೊಳಿಸಿದರು.