ದಾವಣಗೆರೆ:
ಮಹಾನಗರ ಪಾಲಿಕೆಯ 40, 41ನೇ ವಾರ್ಡ್ ವ್ಯಾಪ್ತಿಯಲ್ಲಿ ಬುಧವಾರ ಶಾಸಕ ಎಸ್.ಎ.ರವೀಂದ್ರನಾಥ್ ಅವರು ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಪರ ರೋಡ್‍ಶೋ ನಡೆಸಿ ಮತ ಯಾಚಿಸಿದರು. ಇಲ್ಲಿನ ಎಸ್.ಓ.ಜಿ. ಕಾಲೋನಿ, ಜೆ.ಹೆಚ್.ಪಟೇಲ್ ಬಡಾವಣೆ ಹಾಗೂ ಸುತ್ತಮುತ್ತ ರೋಡ್ ಶೋ ನಡೆಸಿದ ಶಾಸಕ ರವೀಂದ್ರನಾಥ್, ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್‍ಗೆ ಮತ ನೀಡುವ ಮೂಲಕ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿ ಆರಿಸುವಂತೆ ಜನತೆಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗಾಯತ್ರಿ ಸಿದ್ದೇಶ್ವರ್, ಶ್ರೀಮತಿ ಮುರುಗೇಶ ನಿರಾಣಿ, ಮುಖಂಡರಾದ ಬಿ.ಎಸ್.ಜಗದೀಶ, ಶಿವರಾಜ ಪಾಟೀಲ್, ಸಿದ್ದಲಿಂಗಪ್ಪ, ಆರ್.ಲಕ್ಷ್ಮಣ, ನಾಗರಾಜ, ಹೆಚ್.ಸಿ.ಜಯಮ್ಮ, ಪಿ.ಎಸ್.ಜಯಣ್ಣ, ನಿಟುವಳ್ಳಿ ಬಸವರಾಜ, ಕೆ.ಎನ್.ಓಂಕಾರಪ್ಪ, ಮಂಜುನಾಥ, ಕಡ್ಲೆಬಾಳು ಧನಂಜಯ, ಪಿ.ಎಸ್.ಬಸವರಾಜ, ಲೋಕಿಕೆರೆ ನಾಗರಾಜ್ ಮತ್ತಿತರರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
