ಭಗವಾನ್ ಮಹಾವೀರರ ತತ್ವಾದರ್ಶಗಳ ಪಾಲನೆಗೆ ಹೆಚ್ಚು ಆದ್ಯತೆ ನೀಡೋಣ.

ಚಳ್ಳಕೆರೆ

    ಭಗವಾನ್ ಮಹಾವೀರ ಕಳೆದ ಹಲವಾರು ದಶಕಗಳಿಂದ ಜೈನಧರ್ಮದ ಉದ್ದಾರಕ್ಕಾಗಿ ಶ್ರಮಿಸಿದ ಶ್ರೇಷ್ಠ ವ್ಯಕ್ತಿಯಾಗಿದ್ಧಾನೆ. ಜೈನ ಪರಂಪರೆ ಮಹಾವೀರ ಜಯಂತಿಯನ್ನು ಪ್ರತಿವರ್ಷವೂ ಸಂಭ್ರಮ ಸಡಗರಗಳಿಂದ ಆಚರಿಸುತ್ತಿದ್ದು, ಇಂದು ಸಮುದಾಯಕ್ಕೆ ಹೆಮ್ಮೆ ತರುವ ವಿಷಯವಾಗಿದೆ. ಮಹಾವೀರ ಜಯಂತಿ ಆಚರಣೆ ಮೂಲಕ ಇವರ ಆದರ್ಶಗಳ ಪಾಲನೆಗೆ ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಮಾಜಿ ಶಾಸಕ ಡಿ.ಸುಧಾಕರ ತಿಳಿಸಿದರು.

    ಅವರು, ಬುಧವಾರ ಸಂಜೆ ಇಲ್ಲಿನ ಪಾಶ್ವನಾಥ ಜಿನ ಮಂದಿರದಲ್ಲಿ ಮಹಾವೀರ ಜಯಂತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮಹಾವೀರ ಜಯಂತಿ ಅಂಗವಾಗಿ ಸಮುದಾಯದ ಅನೇಕ ಮುಖಂಡರು ಪಾಶ್ವನಾಥ ಜಿನ ಮಂದಿರದಿಂದ ನೂರಾರು ಸಂಖ್ಯೆಯಲ್ಲಿ ಭಗವಾನ್ ಮಹಾವೀರರ ಪ್ರತಿಮೆಯನ್ನು ಹೊತ್ತು ಮೆರವಣಿಗೆ ನಡೆಸಿದ್ದೀರಿ.

      ಮಹಾವೀರ ಜಯಂತಿ ಕಾರ್ಯಕ್ರಮವನ್ನು ಸಂಭ್ರಮ ಸಡಗರಗಳಿಂದ ಆಚರಿಸುವ ಮೂಲಕ ಜೈನ ಧರ್ಮದ ಪರಂಪರೆಯನ್ನು ಕಾಪಾಡಿದ್ದೀರಿ, ಭಗವಾನ್ ಮಹಾವೀರ ಶ್ರದ್ದೆ ಭಕ್ತಯಿಂದ ಸೇವೆ ಸಲ್ಲಿಸುವ ಎಲ್ಲಾ ಭಕ್ತರಲ್ಲೂ ಆಶೀರ್ವಾದಿಸುವನು ಎಂದರು.

     ಕಾರ್ಯಕ್ರಮದಲ್ಲಿ ಹರ್ಷಿಣಿ ಸುಧಾಕರ್, ಅಂಬಣ್ಣ, ಭರತ್‍ರಾಜ್, ಡಾ.ವಿಜಯೇಂದ್ರ, ಚಂಪಾಲಾಲ್, ಕುಂದನ್ ನವೀನ್, ಗೌರಿಪುರ ಪಾಶ್ವನಾಥ್, ಚೇತನ್, ಜೈನ್, ದರ್ಶನ್, ಸಚಿನ್, ಮಹಾವೀರ ಮುಂತಾದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap