ಜಗಳೂರು:
ರಾಜ್ಯದಲ್ಲಿ 28 ಕ್ಕೆ 24 ರಲ್ಲಿ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದು, ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಅಪವಿತ್ರ ಮೈತ್ರಿ ಸರ್ಕಾರ ಬೀಳಲಿದೆ ಎಂದು ಶಾಸಕ ಶ್ರೀರಾಮಲು ಭವಿಷ್ಯ ನುಡಿದಿದ್ದಾರೆ.
ಜಗಳೂರು ಪಟ್ಟಣದಲ್ಲಿ ಗುರುವಾರ ಸಂಜೆ ಸಂಸದ ಜಿ.ಎಂ.ಸಿದ್ದೇಶ್ವರ್ ಪರವಾಗಿ ರೋಡ್ ಶೋ ಮೂಲಕ ಮತಯಾಚಿಸಿದ ನಂತರ ನೆರೆದಿದ್ದ ,ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ನರೇಂಧ್ರ ಮೋದಿ ಪ್ರದಾನಮಂತ್ರಿಯಾದ ಮೇಲೆ ಭ್ರಷ್ಠಾಚಾರ ಮುಕ್ತ ಆಡಳಿತ ಮಾಡುವ ಮೂಲಕ ದೇಶದ ಅಭಿವೃದ್ಧಿ ಮಾಡಿದ್ದಾರೆ. ಅಪವಿತ್ರ ಮೈತ್ರಿ ಸರ್ಕಾರದ ಮುಖ್ಯಂತ್ರಿಯವರ ಮಗನಾದ ನಿಖಿಲ್ ಮಂಡ್ಯದಲ್ಲಿ ಸೋಲು ಕಟ್ಟಿಟ್ಟ ಬುತ್ತಿ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕಕ್ಕೆ ಎರಡನೇ ಹಂತಕ್ಕೆ ಚುನಾವಣಾ ಪ್ರಚಾರ ಮಾಡಲು ಬರುತ್ತಿದ್ದಾರೆ ಕುಮಾರಸ್ವಾಮಿಯವರಿಗೆ ಎಲ್ಲಿದಿಯಪ್ಪ ಹಂತ ಅಲ್ಲಿನ ಜನ ಕೇಳುತ್ತಾರೆ.
ಹಾಸನ, ಮಂಡ್ಯ, ರಾಮನಗರ ಜಿಲ್ಲೆಗಳಿಗೆ ನೂರಾರು ಕೋಟಿ ಹಣ ಕೊಟ್ಟ ಕುಮಾರಸ್ವಾಮಿ , ಗುತ್ತಿಗೆದಾರಿಂದ ಮುಂಗಡ ಹಣ ಪಡೆದು ಚುನಾವಣೆ ಮಾಡುವವರಿಗೆ ಜನರು ಪಾಠ ಕಲಿಸಲಿದ್ದಾರೆ ಎಂದು ತರಾಟೆ ತೆಗೆದುಕೊಂಡರು. ಸಚಿವ ನಿಂಬೆಕಾಯಿ ರೇವಣ್ಣನವರು ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗುವುದಿಲ್ಲ. ಪ್ರಧಾನಮಂತ್ರಿಯಾದರೇ ರಾಜಕೀಯ ಸನ್ಯಾಸ ಮಾಡುತ್ತೇನೆ ಹಂತ ಹೇಳುತ್ತಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಹೆಚ್.ಡಿ.ದೇವೇಗೌಡರು ನರೇಂದ್ರ ಮೋದಿ ಪ್ರಧಾನಂತ್ರಿಯಾದರೇ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದವರು ಈಗ ಎಲ್ಲಿ ಹೋಗಿದ್ದರು ರೇವಣ್ಣನವರೇ ನಿಮ್ಮ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ. ದೇಶದ ಅಭಿವೃದ್ದಿಗೆ ನರೇಂದ್ರ ಮೋದಿ, ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಜಿ.ಎಂ..ಸಿದ್ದೇಶ್ವರ್ ಅತ್ಯದಿಕ ಮತಗಳಿಂದ ಆಯ್ಕೆಯಾಗಲಿದ್ದು, ಕೇಂದ್ರ ಮಂತ್ರಿಯು ಆಗಲಿದ್ದಾರೆ. ಮುಂದೆ ರಾಜ್ಯದಲ್ಲಿ ಸರ್ಕಾರ ತಾನಾಗಿಯೇ ಪತನಗೊಂಡು ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದವರು ಭವಿಷ್ಯ ನುಡಿದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ ದೇಶದ ಅಭಿವೃದ್ಧಿಗೆ ನರೇಂಧ್ರ ಮೋದಿಯವರು ಹಲವಾರು ಅಭಿವೃದ್ಧಿಕೆಲಸಗಳನ್ನು ಮಾಡುವ ಮೂಲಕ ರೈತರು, ಜನಸಾಮಾನ್ಯರು,ವಿದ್ಯಾರ್ಥಿಗಳು, ಬಡವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. 2022ರ ಹೊತ್ತಿಗೆ ಸೂರು ಇಲ್ಲದವರಿಗೆ ಸೂರು, ನಿವೇಶನ, ಉಚಿತವಾಗಿ ಗ್ಯಾಸ್, ಸಿಲೆಂಡರ್, ರೈತರಿಗೆ 6 ಸಾವಿರ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಭ್ರಷ್ಠಾಚಾರ ಮುಕ್ತ ಆಡಳಿತ ಮಾಡಿದ್ದಾರೆ. ಸೈನಿಕರಿಗೆ ಪೂರ್ಣಪ್ರಮಾಣದ ಅಧಿಕಾರ ನೀಡಿ ಉಗ್ರರನ್ನು ಮಟ್ಟ ಹಾಕಿದ್ದಾರೆ.
ಅದೇ ರೀತಿ ದಾವಣಗೆರೆ ಜಿಲ್ಲೆಗೆ9927 ಕೋಟಿ ಹಣವನ್ನು ತಂದು ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಜಗಳೂರು ತಾಲ್ಲೂಕಿಗೆ ಅಪ್ಪರ್ ಭದ್ರಾ ಯಡಿಯೂರಪ್ಪ ಮುಖ್ಯಂತ್ರಿಯಾಗಿದ್ದಾಗ ಜಾರಿಗೆ ಬಂದಿತ್ತು. ಹಿಂದಿನ ಸರ್ಕಾರ 5 ವರ್ಷವಾದರೂ ಏನು ಕೆಲಸ ಮಾಡಿಲ್ಲ. ಆಗಿನ ಶಾಸಕರು ಸುಳ್ಳು ಹೇಳುತ್ತಾ ಕಾಲ ಕಳೆದರು ಎಂದು ಹೆಸರೇಳದೇ ಮಾಜಿ ಶಾಸಕ ಹೆಚ್.ಪಿ.ರಾಜೇಶ್‍ರನ್ನು ತರಾಟೆ ತೆಗೆದುಕೊಂಡರು.
ಸಿರಿಗೆರೆ ಶ್ರೀಗಳ ಒತ್ತಡದಿಂದ 52 ಕೆರೆಗಳಿಗೆ ನೀರು ತುಂಬಿಸಲು 650 ಕೋಟಿ ರೂ.ಗಳು ಬಿಡುಗಡೆಯಾಗಿದ್ದು, ಸರ್ಕಾರ ನಿರ್ಲಕ್ಷೆ ಮಾಡಿದರೇ ಜಗಳೂರಿನಿಂದ ಬೆಂಗಳೂರಿಗೆ ನಾನು ಶಾಸಕ ಎಸ್.ವಿ. ರಾಮಚಂದ್ರ ಪಾದಯಾತ್ರೆ ಮಾಡುತ್ತೇನೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರಲ್ಲದೇ ದೇಶದ ಅಭಿವೃದ್ಧಿಗೆ ಬಿಜೆಪಿಗೆ ಮತನೀಡುವಂತೆ ಮನವಿ ಮಾಡಿದರು. ಮುಂದೆ ಮತ್ತೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದು, ಶ್ರೀರಾಮಲು ಮುಖ್ಯಮಂತ್ರಿಯಾಗುವ ಮೂಲಕ ದೇಶ , ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಅಧಿಕಾರಕ್ಕೆ ಬರುವ ಮೂಲಕ ಅಭಿವೃದ್ಧಿ ಮಾಡಲಿವೆ ಎಂದವರು ವಿಶ್ವಾಸ ವ್ಯಕ್ತ ಪಡಿಸಿದರು.
ಶಾಸಕ ರಾಮಚಂದ್ರ ಮಾತನಾಡಿ ನಾಯಕ ಸಮಾಜದ ಮುಖಂಡರು ಶಾಸಕರಾದ ಶ್ರೀರಾಮಲು ಸಿದ್ದೇಶ್ವರ ಪರವಾಗಿ ರೋಡ್ ಶೋ,ಬಂದಿದಾರೆ. ಹಾಗಯೇ ವಿಧಾನಸಭಾ ಚುನಾವಣೆಯಲ್ಲಿ ನನ್ನ ಪರವಾಗಿ ಮತಯಾಚನೆ ಮಾಡಿದ್ದರು.ಕ್ಷೇತ್ರದಿಂದ ಸಂಸದ ಜಿ.ಎಂ.ಸಿದ್ದಶ್ವರ್‍ಗೆ ಅತ್ಯಧಿಕಮತಗಳ ಲೀಡ್ ಕೊಡಲಿದ್ದೇವೆ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಟಿ.ಗುರುಸಿದ್ದನಗೌಡ್ರು, ತಾಲ್ಲೂಕು ಬಿಜೆಪಿ ಅಧ್ಯಕ್ಷ ಡಿ.ವಿ.ನಾಗಪ್ಪ, ಮುಖಂಡ ಅನಿತ್‍ಕುಮಾರ್, ಅರವಿಂದ್, ಇಂದಿರಾರಾಮಚಂದ್ರಪ್ಪ, ರಾಜ್ಯ ಮಹಿಳಾ ಘಟಕದ ಜಯಲಕ್ಷ್ಮಿಮಹೇಶ್, ಜಿ.ಪಂ.ಸದಸ್ಯರಾದ ರಷ್ಮಿರಾಜಪ್ಪ, ಮಂಜಣ್ಣ ಸೇರಿದಂತೆ ಜಿ.ಪಂ., ತಾ.ಪಂ., ಪಟ್ಟಣ ಪಂಚಾಯಿತಿ ಸದಸ್ಯರುಗಳು ,ಬಿಜೆಪಿ ಮುಖಂಡರುಗಳು ಸೇರಿದಂತೆ ಮಹಿಳೆಯರು ,ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.