ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ಸಾಗಸಂದ್ರ ಶ್ರೀ.ಕೆಂಪಮ್ಮ ದೇವಿಯ ಜಾತ್ರಾ ಮಹೋತ್ಸವ ಏ.19ರಿಂದ ಏ.26ರ ವರೆಗೆ ನಡೆಯಲಿದೆ.ಏ.19 ರಂದು ಅಮ್ಮನವರಿಗೆ ಪುಣ್ಯಾ , ಪ್ರಥಮ ಆರತಿ ಮಡೆ ಸೇವೆ ನಡೆಯಲಿದೆ.
ಏ. 20 ರಂದು ಸೂರ್ಯೋಧಯಕ್ಕರ ಸರಿಯಾಗಿ ಸೂರ್ಯ ಮಂಡಲೋತ್ಸವ ಸಂಜೆ ಶಿವಜ್ಯೋತಿ ಪಣದವರಿಂದ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಹಾಗೂ ಅದೇ ದಿನ ರಾತ್ರಿ ಬೆಳಗಿನ ಜಾವ ಶ್ರೀ ಕೆಂಪಮ್ಮ ದೇವಿಯವಾರತಿ ಅಗ್ನಿಕೊಂಡ ಮಹೋತ್ಸವ ನಡೆಯಲಿದೆ.
ಏ.21 ರಂದು ಇತಿಹಾಸ ಪ್ರಸಿದ್ಧ ಶ್ರೀ ಕೆಂಪಮ್ಮ ದೇವಿಯ ಮಹಾ ರಥೋತ್ಸವ ನಡೆಯಲಿದೆ.ಸಂಜೆ ಆರ್ಕೇಸ್ವ್ರಾ ನಡೆಯಲಿದೆ. ಏ.22 ರಂದು ಅಮ್ಮನವರ ಕುದುರೆ ಉತ್ಸವ ನಡೆಯಲಿದೆ.ಏ.23 ರಂದು ಆನೆ ಉತ್ಸವ ಏ.24ರಂದು ಹೂವಿನ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.ಏ.25ರಂದು ಮುತ್ತಿನ ಪಲ್ಲಕ್ಕಿ ಉತ್ಸವ ಏ.26 ರಂದು ಅಮ್ಮನವರ ಓಕಳಿ ಸೇವೆ ಹಾಗೂ ಆಗಲು ಜಾತ್ರೆ ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
