ಮೋದಿ ಮತ್ತೆ ಪ್ರಧಾನಿಯಾದರೆ ಪ್ರಜಾತಂತ್ರ ವ್ಯವಸ್ಥೆ ಉಳಿಯುವುದಿಲ್ಲ : ಸಿದ್ದರಾಮಯ್ಯ

ಬಳ್ಳಾರಿ

      ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಅಪಾಯದಿಂದ ಪಾರು ಮಾಡಬೇಕಾದರೆ ಕೋಮು ವಾದಿ ಸಂವಿಧಾನ ವಿರೋಧಿ ಬಿಜೆಪಿ ಯನ್ನು ರಾಜ್ಯದಲ್ಲಿ ಒಂದಂಕಿ ದಾಟಲಿಕ್ಕೆ ಬಿಡಬಾರದು ಗೆಲುವನ್ನಷ್ಟೆ ಪಡೆಯಬೇಕು ಎಂದು ರಾಜ್ಯ ಸಮನ್ವಯ ಸಮಿತಿಯ ಅದ್ಯಕ್ಷ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಗಳು ಹೇಳಿದರು.

       ನಗರದ ಎಪಿಎಂಸಿ ವೃತ್ತದಲ್ಲಿ ಗುರುವಾರ ರಾತ್ರಿ 8  ಗಂಟೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಏರ್ಪಡಿಸಿದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ 21 ಕ್ಷೇತ್ರದಲ್ಲಿ ಹಾಗೂ ಜೆಡಿಎಸ್ 7 ಕ್ಷೇತ್ರದಲ್ಲಿ ಸ್ಪರ್ಧಿಸಿದೆ.ನಮ್ಮ ಪಕ್ಷ ಕನಿಷ್ಠ 20 ಕ್ಷೇತ್ರದಲ್ಲಿ ಗೆಲ್ಲಬೇಕು ಎಂದು ಸಭೆಯಲ್ಲಿ ಪ್ರತಿಪಾದಿಸಿದರು.

       ರೈತರ ಸಾಲಮನ್ನ ಮಾಡದ ಒಬ್ಬ ದುರಾತ್ಮ ಮೋದಿ ಎಂದು ಟೀಕಿಸಿ ಅದರ ಜೊತೆಗೆ ಯುವ ಜನರಿಗೆ ಉದ್ಯೋಗ ಕಲ್ಪಿಸದ ಹಾಗೂ ಮಹಿಳಾ ಮೀಸಲಾತಿ ವಿರೋಧಿ ಮೋದಿ ಹಾಗೂ ಬಿಜೆಪಿಯನ್ನು ಮನೆಗೆ ಕಳಿಸಿ ಎಂದು ಮತದಾರರಲ್ಲಿ ಕೋರಿದರು.

      ತಾವೊಬ್ಬರೇ ದೇಶಭಕ್ತ ಎಂದು ಎದೆಯುಬ್ಬಿಸುವ ಮೋದಿ, ಸರ್ಜಿಕಲ್ ಸ್ಟ್ರೈಕ್ ಆದಾಗ ಗನ್ ತಗೊಂಡು ಹೋಗಿ ಇವರೆ ಹೋಡೆದರೇನು ಎಂಬಂತೆ ಸೈನಿಕರನ್ನು ಅಡ್ಡ ಇಟ್ಟುಕೊಂಡು ರಾಜಕೀಯ ಮಾಡುವ ಮುರ್ಖ ಪ್ರಧಾನಿ ಯಾರಾದರೂ ಇದ್ದರೆ ಅದು ಮೋದಿ ಎಂದು ಬಿಂಬಿಸುವ ಮೂಲಕ ಟಾಂಗ್ ನೀಡಿದರು. ಸ್ವತಂತ್ರ ಪೂರ್ವದಲ್ಲಿ 12 ಬಾರಿ ಸರ್ಜಿಕಲ್ ಸ್ಟ್ರೈಕ್ ಆಗಿವೆ ಅದು ಮೋದಿಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು,

      ಅಲ್ಲಂ ವೀರಭದ್ರಪ್ಪ ಮಾತಾನಾಡಿ ನಮ್ಮ ಸರ್ಕಾರ ಇದ್ದ ಸಮಯದಲ್ಲಿ ಸಿಲಿಂಡರ್ 170 ರೂಪಾಯಿಗಳು ಇತ್ತು, ಈಗ 900 ನೂರು ಇದೆ,ಇದು ಮೋದಿ ಅವರು ಮಾಡಿದ್ದು ಎಂಬುದು ಜನರಿಗೆ ಮನವರಿಕೆ ಮಾಡಿಕೊಟ್ಟರು, ಇವರಿಗೆ ಮತ ಹಾಕಬೇಕ ಎಂದು ಜನರನ್ನು ಪ್ರಶ್ನೆ ಮಾಡಿದರು. ನಂತರ ಸಂತೋಷ ಲಾಡ್ ಮಾತಾನಾಡಿ ಬಾಯಿ ಬಾಯಿ ಹುನ್ ಕೋ ಅಚ್ಚೇದೀನ್ ಹಾಯೇಗಾ ಎಂದು ಜನರನ್ನು ಮೋಸ ಮಾಡಿ ಅಧಿಕಾರಕ್ಕೆ ಬಂದರು.

       ಆದರೆ ಜನರಿಗೆ ಸುಳ್ಳು ಹೇಳಿ ಐದು ವರ್ಷಗಳ ಕಾಲ ದೇಶ ಸುತ್ತುವರಿದ ದೇಶದ ಮತದಾರರಿಗೆ ವಂಚನೆ ಮಾಡಿದ್ದಾರೆ, ಎಂದರು. ಗ್ರಾಮೀಣ ಶಾಸಕ ನಾಗೇಂದ್ರ ಮಾತಾನಾಡಿ 50 ಸಾವಿರ ಮತಗಳನ್ನು ಉಗ್ರಪ್ಪ ನವರಿಗೆ ದೊರಕಿಸುವೆ,ಎಂದು ನಾವು ಶಾಸಕರುಗಳು ಚಾಲೆಂಜ್ ಮಾಡಿದ್ದೇವೆ ಸಿದ್ದರಾಮಯ್ಯ ನವರ ಮುಖ ನೋಡಿ ಹೇಳಿದರು. ಹಾಗೆಯೇ ಜೆಡಿಎಸ್ ಜಿಲ್ಲಾ ಅದ್ಯಕ್ಷ ಶಿವಪ್ಪ ಮಾತಾನಾಡಿ ಜೆಡಿಎಸ್ ನ ಎಲ್ಲಾ ಕಾರ್ಯಕರ್ತರು ಮನೆಮನೆಗೆ ಹೋಗಿ ಉಗ್ರಪ್ಪ ನವರ ಪರವಾಗಿ ಮತ ಕೇಳಿ ಅತಿದೊಡ್ಡ ಬಹುಮತ ಸಾಧಿಸಲು ಶ್ರಮವಹಿಸಿ ಕೆಲಸ ಮಾಡುತ್ತೇವೆ ಎಂದರು.

      ಮತೀಯ ಶಕ್ತಿ ಯಾದ ಬಿಜೆಪಿಯನ್ನ ಸೋಲಿಸಿ ಜಾತ್ಯಾತೀತ ಶಕ್ತಿ ಯಾದ ಕಾಂಗ್ರೆಸ್ ನ್ನು ಗೆಲ್ಲಿಸಬೇಕು ಎಂದು ಅಭ್ಯರ್ಥಿ ಉಗ್ರಪ್ಪ ಪ್ರತಿಪಾದಿಸಿದರು. ಹಾಗೆಯೇ ಕೊನೆ ಉಸಿರಾಟ ಇರೊವರಿಗೂ ನಿಮ್ಮ ಸೇವೆ ಮಾಡಿದರು, ನಿಮ್ಮ ಋಣ ತೀರಿಸಲು ಸಾದ್ಯವಿಲ್ಲ, ಮತ್ತೆ ನನ್ನನ್ನು ಪಾರ್ಲಿಮೆಂಟಿಗೆ ಕಳುಹಿಸುತ್ತಿರಿ ಎಂದು ನನಗೆ ವಿಶ್ವಾಸ ಇದೆ ಎಂದು ನಮಸ್ಕರಿಸಿ ದರು.

    ಸಚಿವ ಈ ತುಕಾರಾಂ, ಶಾಸಕರಾದ ಅಲ್ಲಂ ವೀರಭದ್ರಪ್ಪ, ಭೀಮಾ ನಾಯಕ್, ಶಾಸಕ ನಾಗೇಂದ್ರ, ಸಂತೋಷ ಲಾಡ್, ಐವಾನ್ ಡಿಸೋಜ, ಅನಿಲ್ ಲಾಡ್, ಜಿಲ್ಲಾ ಅದ್ಯಕ್ಷ ರಫಿಕ್, ಪ್ರಚಾರ ಸಮಿತಿ ಜೆ ಎಸ್ ಆಂಜನೇಯಲು,ಇಕ್ಬಾಲ್, ಮಂಜುನಾಥ, ವೆಂಕಟೇಶ್ ಹೆಗಡೆ ಬೆಣಕಲ್ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link