ಚಳ್ಳಕೆರೆ
ಅಂತರಾಷ್ಟ್ರ ಮಟ್ಟದಲ್ಲಿ ತನ್ನದೇಯಾದ ಸೇವಾ ಕಾರ್ಯವನ್ನು ಮಾಡುವ ಮೂಲಕ ದೇಶದ ಗಮನ ಸೆಳೆದ ರೋಟರಿ ಕ್ಲಬ್‍ನ ಸಂಸ್ಥಾಪಕ ಪೌಲ್ ಹ್ಯಾರಿಸ್‍ರವರ 151ನೇ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಇಲ್ಲಿನ ರೋಟರಿ ಬಾಲ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ರೋಟರಿ ಕ್ಲಬ್ ಅಧ್ಯಕ್ಷ ಸಂಜಯ್ ಬಾಲಾಜಿ ಮಾತನಾಡಿ, ಇಂದು ರೋಟರಿ ಕ್ಲಬ್ ಗ್ರಾಮೀಣ ಹಾಗೂ ನಗರ ಮಟ್ಟದಲ್ಲಿ ಅನೇಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸ್ಪೂರ್ತಿ ನೀಡಿದವರು ಕ್ಲಬ್‍ನ ಹೆಮ್ಮೆಯ ಸಂಸ್ಥಾಪಕ ಪೌಲ್ ಹ್ಯಾರಿಸ್‍ರವರು. ಅವರ ಸಾರ್ವಜನಿಕ ಸೇವೆಯ ಪರಿಕಲ್ಪನೆಯ ಕನಸು ಇಂದು ನಿಜವಾಗುತ್ತಿದೆ. ದೇಶದಲ್ಲಿ ಸಾವಿರಾರು ರೋಟರಿ ಕ್ಲಬ್‍ಗಳು ಸಾರ್ವಜನಿಕ ಕ್ಷೇತ್ರದಲ್ಲಿ ಬಡವರ ಆರೋಗ್ಯ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಉದ್ಯೋಗ, ತಾಂತ್ರಿಕ ತರಬೇತಿ ಮುಂತಾದ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಅವರ ಆದರ್ಶಗಳೇ ನಮ್ಮ ಸಂಸ್ಥೆಗೆ ದಾರಿದೀಪವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಕೆ.ಜೆ.ಮಂಜುನಾಥ, ಮೂರ್ತಪ್ಪ, ನಾಗೇಶ್, ಡಾ.ಜಯಕುಮಾರ್, ಜಯಪ್ರಕಾಶ್, ಸಿ.ಎಸ್.ಪ್ರಹ್ಲಾದ್, ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.