ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ್ ಗೆಲುವು ಖಚಿತ : ತಿಪ್ಪಾರೆಡ್ಡಿ

ಜಗಳೂರು :

     ದಾವಣಗೆರೆ ಜಿಲ್ಲೆಯ ಬಿಜೆಪಿ ಅಭ್ಯರ್ಥಿಪರ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಮತ ಯಾಚಿಸಿದ್ದು, ಕಾಂಗ್ರೇಸ್- ಜೆಡಿಎಸ್‍ನ ಮೈತ್ರಿ ಅಭ್ಯರ್ಥಿಯ ಎದುರು ಬಿಜೆಪಿ ಅಭ್ಯರ್ಥಿ ಜಿ.ಎಂ ಸಿದ್ದೇಶ್ವರ್ ಗೆಲುವು ಖಚಿತ ಎಂದು ಚಿತ್ರದುರ್ಗ ವಿಧಾನಸಭಾಕ್ಷೇತ್ರದ ಶಾಸಕ ತಿಪ್ಪಾರೆಡ್ಡಿ ಹೇಳಿದರು.

     ಪಟ್ಟಣದಲ್ಲಿ ಭಾನುವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ದೇಶದಲ್ಲಿ ಮೋದಿ ಅಲೆ ಅಬ್ಬರವಾಗಿದೆ. ಪ್ರತಿಯೊಂದು ಕ್ಷೇತ್ರಗಳಲ್ಲಿ ಅಭ್ಯರ್ಥಿಕ್ಕಿಂತ ಮೋದಿ ಮುಖ್ಯ ಎಂಬ ಜನಾಭಿಪ್ರಾಯವಿದೆ .ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

     ದೇಶದಲ್ಲಿ ಭಯೊತ್ಪಾದನೆಗೆ ಮುಕ್ತಿಗೊಳಿಸಲು ಮೋದಿ ಸಮರ್ಥನಾಯಕ ಹಾಗೂ ಆರ್ಥಿಕ ಸಬಲೀಕರಣದ ಕನಸು ನನಸಾಗಿಸಲು ಮೋದಿ ಆಡಳಿತ ಅವಶ್ಯಕವಾಗಿದೆ. ಕಾಂಗ್ರೇಸ್-ಜೆಡಿಎಸ್ ನ ಮೈತ್ರಿ ಸರ್ಕಾರದವರು ಬಿಜೆಪಿ ಪಕ್ಷದ ಮೇಲೆ ಯಾವುದೇ ಆರೋಪಗಳನ್ನು ಮಾಡಿದರು ಮೋದಿ ಅಲೆಮುಂದೆ ಏನು ನಡೆಯದು ಎಂದರು.

     ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಏಕವಚನ ಬಹುವಚನದ ವ್ಯತ್ಯಾಸ ತಿಳಿಯದೆ ಮೋದಿಯವರನ್ನು ನೀಚ, ಮೂರ್ಖ ಎಂಬ ಪದಗಳನ್ನು ಬಳಸಿ ನಿಂದನೆ ಮಾಡುತ್ತಿರುವುದು ಅಯೋಗ್ಯತನದ ಪರಮಾವಧಿಯನ್ನು ಎತ್ತಿಹಿಡಿಯುತ್ತಿದೆ. ಇಂತವರಿಗೆ ಲೋಕಸಭಾ ಚುನವಾಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

     ಈ ಸಂದರ್ಭದಲ್ಲಿ ಚುನಾವಣೆಯ ಪ್ರಚಾರ ಸಮಿತಿ ಸದಸ್ಯ ಸುರೇಶ್, ಬಿಜೆಪಿ ತಾಲೂಕಾಧ್ಯಕ್ಷ ಡಿ.ವಿ ನಾಗಪ್ಪ ಮುಖಂಡರಾದ ಮನೋಹರ ರೆಡ್ಡಿ, ಶ್ರೀನಿವಾಸರೆಡ್ಡಿ, ಹುಲಿಕುಂಟೆ ಶ್ರೇಷ್ಠಿ, ಗೌರೀಪುರ ಕುಬೇರಪ್ಪ ಸೇರಿದಂತೆ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link