ಸಾಮಾಜಿಕ ನ್ಯಾಯ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಋಣ ತೀರಿಸಬೇಕು-ಶಿವುಯಾದವ್

ಜಗಳೂರು:

       ಸಾಮಾಜಿಕ ನ್ಯಾಯ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಋಣ ತೀರಿಸಬೇಕು ಎಂದು ಅಲೆಮಾರಿ ಮತ್ತು ಅರೆಅಲೆಮಾರಿ ಅಭಿವೃದ್ದಿ ನಿಗಮದ ನಿರ್ದೇಶಕ ಶಿವುಯಾದವ್ ಹೇಳಿದರು.

        ಪಟ್ಟಣದಲ್ಲಿ ಭಾನುವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಕಾಡುಗೊಲ್ಲ ಸಮುದಾಯವನ್ನು ಹಲವು ಸೌಲಭ್ಯಗಳನ್ನು ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತಂದಿದೆ. ರಾಜ್ಯದಲ್ಲಿ ಅಧಿಕಾರಕ್ಕೂ ಮುನ್ನ ಕಾಂಗ್ರೆಸ್ ಪಕ್ಷದವರು ತಯಾರಿಸಿದ್ದ ಪ್ರಣಾಳಿಕೆಯ ಪ್ರಕಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಡುಗೊಲ್ಲ ಸಮುದಾಯದ ಮಕ್ಕಳ ವಿದ್ಯಾಬ್ಯಾಸಕ್ಕೆ ಹಾಸ್ಟೆಲ್ ಸೌಲಭ್ಯ, ಶಿಷ್ಯವೇತನ ಕಲ್ಪಿಸಿದ್ದಾರೆ.

       ಅಲ್ಲದೆ ಸಮುದಾಯದ ಸರ್ವತೋಮುಖ ಅಭಿವೃದ್ದಿಗಾಗಿ ಎಸ್‍ಟಿ ಮೀಸಲಾತಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದರೂ ಮೌನವಹಿಸಿದ ಬಿಜೆಪಿ ಪಕ್ಷಕ್ಕೆ ನಮ್ಮ ಸಮಾಜದ ಮತಗಳನ್ನು ಕೇಳುವ ನೈತಿಕ ಹಕ್ಕಿಲ್ಲ ಎಂದರು.

        ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿಪ್ಪೇಸ್ವಾಮಿಗೌಡ, ಕೆಪಿಸಿಸಿ ಸದಸ್ಯ ಬಾಲರಾಜ್, ಮಾಜಿ. ಜಿಪಂ ಸದಸ್ಯ ಹನುಮಂತಪ್ಪ, ಕಿಸಾನ್ ವಿಭಾಗದ ಜಿಲ್ಲಾ ಕಾರ್ಯದರ್ಶಿ ಪ್ರವೀಣ, ಅಸಂಘಟಿತ ಕಾಂಗ್ರೆಸ್ ನ ರಮೇಶ, , ಜಿಲ್ಲಾಮುಖಂಡರಾದ ಗಂಗಾಧರಪ್ಪ, ನಿಜಲಿಂಗಪ್ಪ ಸೇರಿದಂತೆ ಇತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link