ಬೆಂಗಳೂರು
ಅಣ್ಣನನ್ನು ಕೊಂದು ಸುಟ್ಟು ಹಾಕಿದ್ದಕ್ಕೆ ರೊಚ್ಚಿಗೆದ್ದು ನಡು ರಸ್ತೆಯಲ್ಲೇ ಅತ್ತಿಗೆ ಮತ್ತು ಆಕೆಯ ಪ್ರಿಯಕರನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಇಬ್ಬರು ಭಾಮೈದರು ಸೇರಿ ಮೂವರಲ್ಲಿ ಓರ್ವನನ್ನು ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ
ಹಲ್ಲೆಯಿಂದ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಯಚೂರು ಮೂಲದ ಗಂಗಮ್ಮ ಮತ್ತು ಆಕೆಯ ಪ್ರಿಯಕರ ಗಡ್ಡಪ್ಪ ಸ್ಥಿತಿ ಗಂಭೀರವಾಗಿದೆ.ಕೃತ್ಯವೆಸಗಿದ ಚನ್ನಪ್ಪನನ್ನು ಬಂಧಿಸಿ ಪರಾರಿಯಾಗಿರುವ ಮತ್ತಿಬ್ಬರಿಗಾಗಿ ತೀವ್ರ ಶೋಧ ನಡೆಸಿದ್ದಾರೆ
ಕೃತ್ಯದ ವಿವರ
ಕಳೆದ 15 ವರ್ಷಗಳ ಹಿಂದೆ ಗಂಗಮ್ಮ ಅಂಬರೀಶ್ ಎಂಬಾತನನ್ನು ವಿವಾಹವಾಗಿದ್ದು ಕೂಲಿ ಅರಸಿ ನಗರಕ್ಕೆ ಬಂದಿದ್ದ ದಂಪತಿ ಗಾರೆ ಕೆಲಸ ಮಾಡಿಕೊಂಡು ವಿದ್ಯಾರಣ್ಯಪುರದದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು ಕೆಲ ವರ್ಷಗಳ ನಂತರ ಪತಿ ಅಂಬರೀಶ್‍ಗೆ ಸ್ನೇಹಿತನಾಗಿದ್ದ ಗಡ್ಡಪ್ಪ ಪರಿಚಯದ ಮೇಲೆ ಆಗಾಗ ಮನೆಗೆ ಬಂದು ಹೋಗುತ್ತಿದ್ದ ಈ ವೇಳೆ ಪರಿಚಯವಾಗಿದ್ದ ಗಂಗಮ್ಮನ ಜೊತೆ ಸ್ನೇಹ ಬೆಳೆದು ಅದು ಅನೈತಿಕ ಸಂಬಂಧ ತಿರುಗಿತ್ತು.
ಅನೈತಿಕ ಸಂಬಂಧ ವಿಷಯ ಗೊತ್ತಾಗಿ ಅಂಬರೀಶ್ ಆಕ್ರೋಶಗೊಂಡು ಪತ್ನಿಗೆ ಬುದ್ದಿ ಹೇಳಿದರೂ ಆಕೆಯ ವರ್ತನೆ ಸರಿ ಹೋಗಿರಲಿಲ್ಲ ಪತಿಯ ಗಲಾಟೆ ಹೆಚ್ಚಾದಾಗ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕಳೆದ 2016ರಲ್ಲಿ ಪ್ರಿಯಕರ ಗಡ್ಡಪ್ಪನೊಂದಿಗೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿ ಚಿತ್ರದುರ್ಗದ ಬಳಿ ಮೃತದೇಹವನ್ನು ಸುಟ್ಟು ಹಾಕಿ ಕಾಣೆಯಾಗಿರುವ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಜೈಲಿನಿಂದ ಬಿಡುಗಡೆ
ಪೆÇಲೀಸ್ ತನಿಖೆಯಲ್ಲಿ ಕೊಲೆ ಎನ್ನುವುದು ಸಾಬೀತಾಗಿ ಬಂಧಿತರಾಗಿದ್ದ ಗಂಗಮ್ಮ ಮತ್ತು ಆಕೆಯ ಪ್ರಿಯಕರ ಗಡ್ಡಪ್ಪ ಮೂರು ವರ್ಷ ಕಾಲ ಜೈಲು ಶಿಕ್ಷೆ ಅನುಭವಿಸಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದು ಚಿಕ್ಕಬಿದರಕಲ್ಲು ಸಮೀಪದ ಅಂಚೆಪಾಳ್ಯದಲ್ಲಿ ಸಂಸಾರ ಹೂಡಿದ್ದಳು.
ಇತ್ತ ಅಣ್ಣನ ಸಾವಿಗೆ ಕಾರಣವಾದ ಅತ್ತಿಗೆಯ ಮೇಲಿನ ಪ್ರತೀಕಾರಕ್ಕಾಗಿ ಚನ್ನಪ್ಪ, ಆಲಪ್ಪ ಮತ್ತು ಮೃತ ಅಂಬರೀಶನ ತಂಗಿಯ ಗಂಡ ಮುದುಕಪ್ಪ ಕಾದು ಕುಳಿತಿದ್ದರು ಜಾಮೀನಿನ ಮೇಲೆ ಬಂದ ಗಂಗಮ್ಮ ತನ್ನ ಮೊಬೈಲ್‍ನಿಂದ ಮೈದುನರಿಗೆ ಗಡ್ಡಪ್ಪನ ಜೊತೆ ಇರುವ ಖಾಸಗಿ ಫೋಟೊಗಳನ್ನ ಕಳಿಸುವ ಮೂಲಕ ರೊಚ್ಚಿಗೇಳುವಂತೆ ಮಾಡಿದ್ದಳು.
ರೊಚ್ಚಿಗೆದ್ದ ಮೈದುನರು
ರೊಚ್ಚಿಗೆದ್ದ ಮೂವರು ಅಣ್ಣನ ಸಾವಿನ ಪ್ರತೀಕಾರವನ್ನ ತೀರಿಸಿಕೊಳ್ಳಲು ಮೂರು ದಿನಗಳ ಹಿಂದೆ ನಗರಕ್ಕೆ ಬಂದು ಸಂಚು ರೂಪಿಸಿ ಗಡ್ಡಪ್ಪ ಹಾಗೂ ಗಂಗಮ್ಮ ಕೆಲಸ ಮುಗಿಸಿಕೊಂಡು ಚಿಕ್ಕಬಿದರಕಲ್ಲುವಿನ ಆಟೋ ನಿಲ್ದಾಣದ ಬಳಿ ಬೈಕ್‍ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿ ಹಲ್ಲೆ ಮಚ್ಚಿನಿಂದ ಹಲ್ಲೆ ನೆಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
