ಬೆಂಗಳೂರು
ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಅಭದ್ರತೆಯ ಆತಂಕ ಕಾಡ್ತಿದೆಯಾ ಇಂತಹ ಒಂದು ಅನುಮಾನಕ್ಕೆ ವಿಧಾನಸೌಧದ ಆಸುಪಾಸಿನಲ್ಲಿ ಹೆಚ್ಚಾಗಿರುವ ರಹಸ್ಯ ಕ್ಯಾಮರಾಗಳ ಹಾವಳಿ ಕಾರಣವಾಗಿದೆ.
ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ರಾತ್ರಿ ವೇಳೆ ವಿಧಾನಸೌಧ ಸುತ್ತಮುತ್ತ ಡ್ರೋಣ್ ಕ್ಯಾಮೆರಾಗಳ ಹಾರಾಟವಾಗುತ್ತಿದ್ದು, ರಹಸ್ಯವಾಗಿ ವಿಧಾನಸೌಧದ ಚಿತ್ರೀಕರಣ ಮಾಡಲಾಗುತ್ತಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಪತ್ರ ಬರೆದಿದ್ದಾರೆ.
ಶಕ್ತಿಸೌಧ, ವಿಧಾನಸೌಧ, ವಿಕಾಸಸೌಧ, ಶಾಸಕರ ಭವನ, ರಾಜಭವನ, ಬಹುಮಹಡಿಗಳ ಕಟ್ಟಡ, ಹೈಕೋರ್ಟ್, ಲೋಕಾಯುಕ್ತ, ಮಾಹಿತಿ ಸೌಧ, ಕರ್ನಾಟಕ ಲೋಕ ಸೇವಾ ಆಯೋಗ, ಮಾನವ ಹಕ್ಕುಗಳ ಆಯೋಗದ ಕಚೇರಿಗಳನ್ನ ಡ್ರೋಣ್ ಬಳಸಿ ಫೋಟೊ ತೆಗೆಯುತ್ತಿರುವ ಗುಮಾನಿ ಇದೆ.
ಈ ಡ್ರೋಣ್‍ಗಳ ಬಗ್ಗೆ ನಿಗಾವಹಿಸಲು ನಿರ್ವಹಣಾ ಘಟಕ ಸ್ಥಾಪಿಸುವಂತೆ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಹೀಗಾಗಿ ಸಂರಕ್ಷಿತ ಕಟ್ಟಡಗಳು, ಶಕ್ತಿ ಕೇಂದ್ರಗಳ ಮೇಲೆ ಡ್ರೋಣ್ ಹಾರಿಸುತ್ತಿರುವವರು ಯಾರು.ವಿಧಾನಸೌಧ ಹಾಗೂ ಅದರ ಸುತ್ತಲಿನ ಕಚೇರಿಗಳಿಗೂ ಭದ್ರತೆ ಕೊರತೆ ಇದೆಯಾ ಎಂಬ ಪ್ರಶ್ನೆಗಳು ಶುರುವಾಗಿದೆ. ಅಲ್ಲದೆ ಅನುಮತಿ ಇಲ್ಲದೆ ಬೆಂಗಳೂರಿನಲ್ಲಿ ಡ್ರೋಣ್‍ಗಳ ಹಾರಾಟ ನಿಷೇಧಿಸಲಾಗಿದೆ. ಹಾಗಿದ್ದೂ ರಾತ್ರಿ ವೇಳೆ ಡ್ರೋಣ್ ಬಳಕೆಯಾಗಿರುವುದು ನಿಜಕ್ಕೂ ಆತಂಕಕಾರಿ ವಿಷಯವಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
