ಚುನಾವಣೆಗೆ ಸಜ್ಜಾದ ಹರಪ್ಪನಹಳ್ಳಿ..!!

ಹರಪನಹಳ್ಳಿ:

      ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಗೆ ಹರಪನಹಳ್ಳಿ ತಾಲ್ಲೂಕು ಸಕಲ ಸಿದ್ಧತೆಗೊಂಡಿದ್ದು, ತಾಲ್ಲೂಕಿನಲ್ಲಿ ಎರಡು ಪಿಂಕ್ ಮತಗಟ್ಟೆ ಸೇರಿ ಒಟ್ಟು 257 ಮತಗಟ್ಟೆ ಸ್ಥಾಪಿಸಲಾಗಿದೆ.

      ತಾಲ್ಲೂಕಿನ 104356 ಪುರುಷ, 99739 ಮಹಿಳೆಯರು ಹಾಗೂ 18 ಇತರೆ ಸೇರಿ ಒಟ್ಟು 204113 ಮತದಾರರಿದ್ದಾರೆ. ನಂದಿಬೇವೂರು ಹಾಗೂ ಪಟ್ಟಣದ ಉಪ್ಪಾರಗೇರಿಯಲ್ಲಿ ಸಖಿ (ಪಿಂಕ್) ಮತಗಟ್ಟೆ ಸ್ಥಾಪಿಸಲಾಲಾಗಿದೆ. ನಾಗಲಾಪುರ ಗ್ರಾಮದ ಮತಗಟ್ಟೆ ಸಂಖ್ಯೆ 238ರಲ್ಲಿ ಕೇವಲ 273 ಮತದಾರರಿದ್ದು, ಇದು ಅತಿ ಚಿಕ್ಕ ಮತಗಟ್ಟೆ ಆಗಿದೆ. ಪಟ್ಟಣದ ಅಪ್ಪರ ಮೇಗಳಪೇಟೆ ಶಾಲೆಯ ಮತಗಟ್ಟೆ ಸಂಖ್ಯೆ 111 ಅತಿಹೆಚ್ಚು ಅಂದರೆ 1410 ಮತದಾರರನ್ನು ಹೊಂದಿರುವ ಮತಗಟ್ಟೆಯಾಗಿದೆ.

      78 ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿಗೆ ಇಬ್ಬರಂತೆ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ. ಅಂಗವಿಕಲರಿಗೆ ಅನುಕೂಲವಾಗಲೆಂದು ಪ್ರತಿ ಮತಗಟ್ಟೆಗೆ ವೀಲ್ ಚೇರ್ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಸಹಾಯಕ ಚುನಾವಣಾಧಿಕಾರಿ ಡಾ.ಬಿ.ಎಸ್. ಮಂಜುನಾಥಸ್ವಾಮಿ ತಿಳಿಸಿದರು.

      35 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪಟ್ಟಣದ ತರಳಬಾಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ವ್ಯವಸ್ಥೆ ಮಾಡಲಾಗಿದೆ’ ಎಂದು ತಹಶೀಲ್ದಾರ ಎಸ್.ಎ. ಪ್ರಸಾದ್ ತಿಳಿಸಿದರು.

      ಭದ್ರತೆ ಕುರಿತು ಮಾಹಿತಿ ನೀಡಿದ ಡಿವೈಎಸ್ಪಿ ನಾಗೇಶ ಐತಾಳ, `ಒಬ್ಬರು ಡಿವೈಎಸ್ಪಿ, ನಾಲ್ಕು ಜನ ಸಿಪಿಐ, ಆರು ಪಿಎಸ್‍ಐ, 10 ಜನ ಎಎಸ್‍ಐ, 180 ಪೇದೆಗಳು, 155 ಗೃಹ ರಕ್ಷಕದಳ, ಸಿವಿಲ್ ಡಿಪೆನ್ಸ್ 30 ಜನರು, ಜೈಲು ವಾರ್ಡನ್ 12 ಜನರು, ಆಪ್ ಸೆಕ್ಷನ್ ಬಿಎಸ್‍ಎಫ್ ಸಿಬ್ಬಂದಿ, ಕೆಎಸ್‍ಆರ್ ಪಿ, ಡಿಆರ್, ಸಿಆರ್ ಒಂದೊಂದು ವಾಹನಗಳು, 15 ಸೆಕ್ಟರ್ ಮೊಬೈಲ್ ಹಾಗೂ 5 ಸೂಪರ ವೈಸರ್ ಮೊಬೈಲ್ ಹೀಗೆ ಭದ್ರತಾ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link