ಮಾಲಿನ್ಯ ನಿಯಂತ್ರಣ : ಹೊಸ ಪರಿಸರ ನೀತಿ ಜಾರಿಗೆ ಮುಂದಾದ ಮೆಟ್ರೊ ನಿಗಮ

ಬೆಂಗಳೂರು

      ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಉಂಟಾಗುವ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಹೊಸ ಪರಿಸರ ನೀತಿ ಜಾರಿ ಮಾಡಲು ಬೆಂಗಳೂರು ಮೆಟ್ರೊ ರೈಲು ನಿಗಮ ಮುಂದಾಗಿದೆ

       ಉಳಿದಂತೆ ಪ್ಲಾಸ್ಟಿಕ್ ಬಳಕೆ ನೀರಿನ ಮಿತ ಬಳಕೆಗೂ ಮೆಟ್ರೊ ರೈಲು ನಿಗಮ ಮುಂದಾಗಿದ್ದು, 2ನೇ ಹಂತದ ಮೆಟ್ರೊ ಕಾಮಗಾರಿಯಲ್ಲಿ ಈ ನೀತಿ ಜಾರಿಗೊಳಿಸುವ ಮೂಲಕ ಮೆಟ್ರೊ ಕಾಮಗಾರಿ ವೇಳೆ ಕಟ್ಟಡ ತ್ಯಾಜ್ಯ ವಿಲೇವಾರಿ ಸಮರ್ಪಕ ನಿರ್ವಹಣೆಗೆ ಮುಂದಾಗಿರುವ ಬೆಂಗಳೂರು ಮೆಟ್ರೊ, ತ್ಯಾಜ್ಯ ಮರುಬಳಕೆ ಹಾಗೂ ಮೆಟ್ರೊ ಮಾರ್ಗ ನಿರ್ಮಾಣ ಸ್ಥಳಗಳಲ್ಲಿ ಮಣ್ಣಿನ ಫಲವತ್ತತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದೂ ಸೇರಿದಂತೆ ನಿಲ್ದಾಣಗಳಲ್ಲಿ ಉಂಟಾಗುವ ಕಸ ಹಾಗೂ ಕಾಮಗಾರಿ ವೇಳೆ ಸೃಷ್ಟಿಯಾಗುವ ಕಸವನ್ನು ಸಮರ್ಪಕ ವಿಲೇವಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದೆ.

        ಉಳಿದಂತೆ ಕಚೇರಿಗಳಲ್ಲಿ ಮರದ ತ್ಯಾಜ್ಯ, ಕಾಗದದ ಮರುಬಳಕೆ ಮಾಡುವ ಕ್ರಮಗಳನ್ನು ಜಾರಿ ಮಾಡಬೇಕು. ನೀರನ್ನು ಸಂಸ್ಕರಿಸಿ ಮರು ಬಳಕೆ ಮಾಡುವ ಕ್ರಮಗಳನ್ನು ಜಾರಿಗೊಳಿಸಲಾಗುವುದೆಂದು ಹೊಸ ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.
ಮೆಟ್ರೊ ನಿಲ್ದಾಣಗಳಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ ನೀರನ್ನು ಶುದ್ಧೀಕರಣ ಮಾಡಿ ಉದ್ಯಾನವನಕ್ಕೆ ಬಳಸುವುದು ಹಾಗೂ ಪ್ರತಿ ನಿಲ್ದಾಣಗಳಲ್ಲಿ, ಡಿಪೋಗಳಲ್ಲಿ ನೀರಿನ ಬಳಕೆ ಪ್ರಮಾಣ ಲೆಕ್ಕಾಚಾರ ಕೈಗೊಳ್ಳಲಾಗುವುದೆಂದು ತಿಳಿಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link