ಚುನಾವಣೆ ಕರ್ತವ್ಯ ನಿರತರಾಗಿದ್ದು ಸಾವನ್ನಪ್ಪಿದ ಸಿಬ್ಬಂದಿಗಳ ಕುಟುಂಬಕ್ಕೆ 15 ಲಕ್ಷ ಪರಿಹಾರ

ಬೆಂಗಳೂರು

      ಲೋಕಸಭಾ ಚುನಾವಣಾ ಕರ್ತವ್ಯದ ವೇಳೆ ರಾಜ್ಯದಲ್ಲಿ ಮೃತಪಟ್ಟ 9 ಮಂದಿ ಸಿಬ್ಬಂದಿಗಳ ಕುಟುಂಬಕ್ಕೆ 15 ಲಕ್ಷ ಪರಿಹಾರ ನೀಡುವಂತೆ ಚುನಾವಣಾ ಆಯೋಗ ಆದೇಶಿಸಿದೆ.

      ಮೃತಪಟ್ಟ ಸಿಬ್ಬಂದಿಯ ಕುಟುಂಬಸ್ಥರಿಗೆ 15 ಲಕ್ಷ ಪರಿಹಾರ ನೀಡುವಂತೆ ಆಯೋಗ ಸರ್ಕಾರಕ್ಕೆ ಆದೇಶ ನೀಡಿದೆ.ಚುನಾವಣಾ ಆಯೋಗ ಈ ವಿಷಯವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಲು ಆದೇಶ ಹೊರಡಿಸಿದೆ.

     ರಾಜ್ಯದಲ್ಲಿ 2 ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆ ಕರ್ತವ್ಯದ ವೇಳೆ ಏಳು ಜನ ಹೃದಯಾಘಾತದಿಂದ ಮೃತಪಟ್ಟಿದ್ದರೆ ,ಒಬ್ಬರು ಅಘಾತದಿಂದ ಮೃತಪಟ್ಟಿದ್ದು, ಈ ಎಲ್ಲ ಅಧಿಕಾರಿಗಳ ಕುಟುಂಬಕ್ಕೆ ಕನಿಷ್ಠ 15 ಲಕ್ಷ ರೂ. ಪರಿಹಾರ ನೀಡುವುದಾಗಿ ಚುನಾವಣಾ ಆಯೋಗ ಘೋಷಿಸಿದೆ.

     ಲೋಕಸಭಾ ಚುನಾವಣೆಗೆ ನಿಯೋಜನೆಗೊಂಡಿದ್ದ ಶಿವಪುತ್ರ ಅವರು ಶಹಪುರ ತಾಲ್ಲೂಕಿನ ಹಳೆಸಗರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದರು. ಯಾದಗಿರಿ ಜಿಲ್ಲೆಯ ಸುರಪುರದ ಎಸ್‍ಪಿ ಕಾಲೇಜಿನಲ್ಲಿ ಮತಯಂತ್ರಗಳ ಮಸ್ಟ್‍ರಿಂಗ್ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದರು.

    ಉಳಿದಂತೆ ಚಾಮರಾಜನಗರದಲ್ಲಿ ಮತಗಟ್ಟೆ ಅಧಿಕಾರಿ ಶಾಂತಮೂರ್ತಿ, ಚುನಾವಣಾ ತರಬೇತಿ ವೇಳೆ ತೆಕ್ಕಲಕೋಟೆ ಗ್ರಾಮದ ಶಿಕ್ಷಕ ಬಿ. ರಮೇಶ್ ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 8 ಜನ ಮೃತಪಟ್ಟಿದ್ದರು.ಚುನಾವಣೆ ಸಂದರ್ಭದಲ್ಲಿ ಗುಂಪು-ಘರ್ಷಣೆ, ಬಾಂಬ್ ಸ್ಫೋಟ, ನಕ್ಸಲ್ ದಾಳಿ ಇತರ ದುರ್ಘಟನೆಗಳಿಂದ ಮೃತಪಟ್ಟರೆ, 30 ಲಕ್ಷ ಹಾಗೂ ಶಾಶ್ವತ ಅಂಗವೈಕಲ್ಯಕ್ಕೊಳಗಾದರೆ 7.5 ಲಕ್ಷ ಪರಿಹಾರ ನೀಡುವ ಕುರಿತಂತೆ ಚುನಾವಣಾ ಆಯೋಗ 2014ರಲ್ಲೇ ಸೂಚಿಸಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link