ಗುಣಮಟ್ಟದ ಕಲಿಕೆಗೆ ಬೋದನಾ ಕ್ರಮ ಬದಲಾಗಬೇಕು

ಚಿತ್ರದುರ್ಗ;

      ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯಾದಂತೆ ಶಿಕ್ಷಕರು ವಿವಿಧ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಮನ್ವಯ ಸಮಿತಿಯ ಅಧ್ಯಕ್ಷ ಪಿ.ರಾಜಣ್ಣ ಹೇಳಿದರು. ನಗರದ ಸರ್ಕಾರಿ ಡಿ.ಎಲ್.ಇ.ಡಿ ಕಾಲೇಜಿಗೆ ಭೇಟಿ ನೀಡಿ ಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಶಿಕ್ಷಕರು ತಮ್ಮ ವೃತ್ತಿಯಲ್ಲಿ ಸಾಮಥ್ರ್ಯ ಹೆಚ್ಚಿಸಿಕೊಳ್ಳಬೇಕು. ಮಕ್ಕಳ ಕಲಿಕೆಯಲ್ಲಿ ಭಿನ್ನತೆಯಿದ್ದು ವಿವಿಧ ಆಕರ್ಷಣೀಯ ಬೋಧನೋಪಕರಣಗಳನ್ನು ಬಳಸಿ ಚಟುವಟಿಕೆಯುಕ್ತವಾಗಿ ಬೋಧಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.

       ಉಪನ್ಯಾಸಕ ಜಿ.ಎಸ್.ನಾಗರಾಜ್ ಮಾತನಾಡಿ ಶಿಕ್ಷಕ ವೃತ್ತಿ ಪವಿತ್ರವಾದುದು, ಉತ್ತಮ ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ ವಾಗುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯಾದಂತೆ ಬೋಧನೆಯಲ್ಲಿ ತಾಂತ್ರಿಕ ಜ್ಞಾನ ಅಳವಡಿಸಿಕೊಳ್ಳಬೇಕು. ಮಕ್ಕಳು ಶಿಕ್ಷಕರನ್ನು ಅನುಕರಿಸುವುದರಿಂದ ತಾವು ಮಾದರಿಯಾಗಿದ್ದು,ಮೌಲ್ಯಯುತ ಶಿಕ್ಷಣ ನೀಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು ಎಂದರು. ಉಪನ್ಯಾಸಕರಾದ ಬಿ.ವಿ. ತಿಪ್ಪೇಸ್ವಾಮಿ,ಎಸ್.ಬಸವರಾಜು, ಎಂ.ರಂಗನಾಥ ಮತ್ತು ಶೋಭಾರಾಣಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link