ಹುಳಿಯಾರು
ಹಂದನಕೆರೆ ಹೋಬಳಿಯ ಬೊಮ್ಮೇನಹಳ್ಳಿ ಗ್ರಾಮದಲ್ಲಿ ನೀರಿನ ಅಭಾವ ಉಂಟಾಗಿದ್ದು ಹೊಸ ಕೊಳವೆ ಬಾವಿ ಕೊರೆಸಬೇಕು. ಅಲ್ಲಿಯ ತನಕ ಪ್ರತಿ ಕುಟುಂಬಕ್ಕೆ ನಿತ್ಯ 20 ಬಿಂದಿಗೆ ನೀರು ಪೂರೈಕೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಗ್ರಾಮದಲ್ಲಿ ಇಲ್ಲಿಯವರೆವಿಗೂ 2 ಕೊಳವೆ ಬಾವಿ ನೀರಿನ ಆಸರೆಯಾಗಿತ್ತು. ಆದರೆ ಒಂದೆರಡು ತಿಂಗಳಿಂದ ಈ ಎರಡೂ ಕೊಳವೆ ಬಾವಿಗಳಲ್ಲಿ ಅಂತರ್ಜಲ ಬರಿದಾಗಿ ಹನಿ ನೀರೂ ಬಾರದಾಗಿದೆ. ಹಾಗಾಗಿ ನೀರಿಗಾಗಿ ನಿತ್ಯ ಪರದಾಡುವ ಸ್ಥಿತಿ ಒದಗಿದೆ ಎಂದು ಗ್ರಾಮದ ಶ್ರೀಧರ್ ದೂರಿದ್ದಾರೆ.
ಗ್ರಾಮ ಪಂಚಾಯಿತಿ ವತಿಯಿಂದ ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ನಿತ್ಯ ಬರುವ ಒಂದೆರಡು ಟ್ಯಾಂಕರ್ ನೀರು ಗ್ರಾಮದ ಅಷ್ಟೂ ಮನೆಗೆ ಸಾಕಾಗುವುದಿಲ್ಲ. ಪರಿನಾಮ ಟ್ಯಾಂಕರ್ ನಿರು ಹಿಡಿಯಲು ನಾಮುಂದು, ತಾಮುಂದು ಎಂದು ಕಿತ್ತಾಡಿಕೊಮಡು ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನವುದು ಅವರ ದೂರು.
ಅಡಿಗೆ, ಸ್ನಾನ, ಶೌಚಾಲಯಕ್ಕೆ, ಪಾತ್ರೆ ಸಾಮಾಗ್ರಿ ತೊಳೆಯುವುದು ಸೇರಿದಂತೆ ದನ–ಕರುಗಳಿಗೆ ನೀರು ಅಗತ್ಯವಿದೆ. ಬೇಡಿಕೆಗೆ ತಕ್ಕಂತೆ ನೀರು ಪೂರೈಕೆ ಮಾಡಬೇಕು ಎನ್ನುವುದು ಇಲ್ಲಿನ ಮಹಿಳೆಯರ ಒತ್ತಾಯ. ತಕ್ಷಣ ಗ್ರಾಮದಲ್ಲಿ ಮತ್ತೊಂದು ಕೊಳವೆ ಬಾವಿ ಕೊರೆಸಿ, ನೀರು ಪೂರೈಕೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
