ಕುಡಿದ ಅಮಲಿನಲ್ಲಿ ಈಜಲು‌ ಹೋದ ಹೆಲ್ತ್ ಇನ್ಸ್​ಪೆಕ್ಟರ್​ ಸಾವು!!

ರಾಮನಗರ:

      ಕುಡಿದ ಅಮಲಿನಲ್ಲಿ ಈಜಲು‌ ಹೋಗಿದ್ದ ಹೆಲ್ತ್ ಇನ್ಸ್​ಪೆಕ್ಟರ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿದೆ.

      ಜಿಲ್ಲೆಯ ಮಾಗಡಿಯ ತಾಲೂಕಿನ ಬೈಚಾಪುರ ಗ್ರಾಮದ ನಿವಾಸಿ ಶಂಕರ್ (32) ಮೃತ ದುರ್ವೈವಿ. ಇವರು ಬಿಡದಿಯ ಅರೋಗ್ಯ ಕೇಂದ್ರದಲ್ಲಿ ಆರೋಗ್ಯ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

      ಶಂಕರ್ ನಾಲ್ಕು ಜನ ಸ್ನೇಹಿತರೊಂದಿಗೆ ಮದ್ಯ ಸೇವಿಸಿ ರಾಮನಗರದ‌ ಸಿಂಗ್ರಬೋವಿದೊಡ್ಡಿಯಲ್ಲಿನ ಕೆರೆಯಲ್ಲಿ ಈಜಲು ತೆರೆಳಿದ್ದರು. ಈ ವೇಳೆ ಶಂಕರ್ ಕಾಲಿಗೆ ಗಿಡವೊಂದು ಸುತ್ತಿಕೊಂಡು ಈಜಲಾಗದೆ ಮುಳುಗಿದ್ದಾರೆ. ಹೀಗೆ ನೀರಿನಲ್ಲಿ ‌ಮುಳುಗಿದ ಅವರು ಉಸಿರಾಡಲಾಗದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

      ಮೃತ ಶರೀರಕ್ಕಾಗಿ ನೆನ್ನೆಯಿಂದ ರಕ್ಷಣಾ ತಂಡ ಶೋಧ ಕಾರ್ಯ ನಡೆಸಿದ್ದು, ಗುರುವಾರ ಬೆಳಗ್ಗೆ ಶವ ಪತ್ತೆಯಾಗಿದೆ. ಪ್ರಕರಣ‌ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಂಕರ್ ಜೊತೆ ಇದ್ದ ಮೂವರು ಸ್ನೇಹಿತರನ್ನು ವಶಕ್ಕೆ ಪಡೆಯಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link