ಜಿ ಎಂ ಎಸ್ ಪರವಾಗಿ ಎಂಪಿಆರ್ ರಿಂದ ಧನ್ಯವಾದ ಸಮರ್ಪಣೆ

ಹೊನ್ನಾಳಿ:

     2019ರ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಜರುಗಿದ ಎರಡನೇ ಹಂತದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ ಪರವಾಗಿ ಮತ ನೀಡಿದ ಕ್ಷೇತ್ರದ ಮತದಾರರಿಗೆ ಹಾಗೂ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಕ್ರಿಯೆ ಪ್ರಾರಂಭದಿಂದ ಮತದಾನದ ದಿನದ ಅಂತ್ಯದವರೆಗೆ

      ಬಿಜೆಪಿಯ ಪ್ರಚಾರದಲ್ಲಿ ಹಗಲಿರುಳೆನ್ನದೆ ಶ್ರಮಿಸಿದ ಪಕ್ಷದ ಜನಪ್ರತಿನಿಧಿಗಳು ಪದಾಧಿಕಾರಿಗಳು ಮುಖಂಡರು ಸಹಸ್ರಾರು ಕಾರ್ಯಕರ್ತರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿದ ಸಮಸ್ತ ಕ್ಷೇತ್ರದ ಜನತೆಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದು ಮಾಜಿ ಸಚಿವ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದರು.ಪಟ್ಟಣದ ಹಿರೇಮಠ ಸ್ವಗೃಹದಲ್ಲಿ ವರದಿಗಾರರೊಂದಿಗೆ ಮಾತನಾಡಿದರು.

     ಈ ಚುನಾವಣೆ ಭವ್ಯ ಭಾರತವನ್ನು ಕಟ್ಟುವ ಮಹತ್ತರ ಚುನಾವಣೆಯಾಗಿದ್ದು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ದೇಶಗಳು ಎದುರು ನೋಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರಂತಹ ಪಾರದರ್ಶಕ ರಾಜಕಾರಣಿಯೇ ದೇಶ ಕಟ್ಟುವ ಸಾರಥಿ ಎಂದು 125 ಕೋಟಿ ಜನತೆ ಕಳೆದ ಐದು ವರ್ಷಗಳ ಹಿಂದೆ ಅಧಿಕಾರ ನೀಡಿದ್ದರು. ಜನರ ಆಶಯಗಳಿಗೆ ತಕ್ಕಂತೆ ಪ್ರಧಾನಿಯವರು ಜನತೆಯ ಕಲ್ಯಾಣಕ್ಕಾಗಿ ಎಲ್ಲಾ ವರ್ಗದವರಿಗೆ ಸಾಮಾಜಿಕ ನ್ಯಾಯ ನೀಡಿ ಹಲವಾರು ಮಹತ್ತರ ಯೋಜನೆಗಳನ್ನು ಜಾರಿಗೆ ತಂದು ದೇಶವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಮತ್ತೊಮ್ಮೆ ಮೋದಿಯೆಂಬ ಅಭಿಯಾನದೊಂದಿಗೆ ಜನತೆ ದೇಸದ ಪ್ರಧಾನ ಮಾಡಲು ತೀರ್ಮಾನಿಸಲಿದ್ದಾರೆಂದರು.

     ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು 78% ಮತದಾನವಾಗಿರುವ ಕ್ಷೇತ್ರವಾಗಿ ಪ್ರಥಮ ಸ್ಥಾನದಲ್ಲಿದ್ದು ಈ ಬಾರಿ ಮತದಾರರು ಬಿಜೆಪಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಭಿಮಾನದಿಂದ ಹೆಚ್ಚು ಮತ ನೀಡಿದ್ದಾರೆ. ನಮ್ಮ ಅಭ್ಯರ್ಥಿ ಜಿಎಂ ಸಿದ್ದೇಶ್ವರ್ ಅವರು ಲಕ್ಷಕ್ಕೂ ಹೆಚ್ಚು ಮತಗಳಿಂದ ಜಯಬೇರಿ ಬಾರಿಸಲಿದ್ದು ಹ್ಯಾಟ್ರಿಕ್ ಸಂಸದರೆಂಬ ಹೆಗ್ಗಳಿಕೆಗೆ ಪಾತ್ರರಾಗಿ ಕೇಂದ್ರದಲ್ಲಿ ಮತ್ತೊಮ್ಮೆ ಸಚಿವರಾಗಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link