ದೆಹಲಿ :
ಆಂತರಿಕ ಸರ್ವರ್ ಸಮಸ್ಯೆಯಿಂದಾಗಿ ಶನಿವಾರ ಏರ್ ಇಂಡಿಯಾ ವಿಮಾನಗಳ ಸೇವೆಯಲ್ಲಿ ವ್ಯತ್ಯವಾಗಿದ್ದು, ವಿಶ್ವದಾದ್ಯಂತ ಸಹಸ್ರಾರು ಪ್ರಯಾಣಿಕರು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ.
ವಿಶ್ವದೆಲ್ಲೆಡೆಯ ಏರ್ ಇಂಡಿಯಾ ಸಂಸ್ಥೆಯ ವಿಮಾನ ಪ್ರಯಾಣ ನಿರ್ವಹಣಾ ವ್ಯವಸ್ಥೆ ಬೆಳಿಗ್ಗೆ 3.30 ರಿಂದ 4.30ರವರೆಗೆ ಸ್ಥಗಿತ ಸ್ಥಗಿತಗೊಂಡಿತ್ತು. ಇದರಿಂದ ವಿಮಾನಗಳ ಹಾರಾಟದಲ್ಲೂ ವಿಳಂಬವಾಗಿದ್ದು, ಸಾಕಷ್ಟು ಮಂದಿ ಪ್ರಯಾಣಿಕರು ಪರದಾಡಿದರು.
Air India spokesperson: SITA server is down. Due to which flight operation is affected. Our technical teams are on work and soon system may be recovered. Inconvenience is deeply regretted https://t.co/mxk5bXnasl
— ANI (@ANI) April 27, 2019
ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಏರ್ ಇಂಡಿಯಾ ವಿಮಾನಗಳು ಹಾರಾಟವನ್ನು ಸ್ಥಗಿತಗೊಳಿಸಿದ್ದು, ಸುಮಾರು 6 ಗಂಟೆಗಳ ಕಾಲ ವಿಮಾನಗಳು ಹಾರಾಟ ನಿಲ್ಲಿಸಿತ್ತು. ಬೆಳಗ್ಗೆ 8:45ಕ್ಕೆ ಸಮಸ್ಯೆ ಪರಿಹಾರಗೊಂಡಿದೆ.
‘ಇತರೆ ಸೇವೆಗಳು ಎಂದಿನಂತೆ ಚಾಲ್ತಿಯಲ್ಲಿದ್ದವು. ಸಮಸ್ಯೆ ಸರಿಪಡಿಸಿದ ಬಳಿಕ ಎಲ್ಲ ವಿಮಾನಗಳು ಬೆಳಿಗ್ಗೆ 9ರ ನಂತರ ಪ್ರಯಾಣ ಮುಂದುವರಿಸಿದವು ಎನ್ನಲಾಗಿದೆ’ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ವಕ್ತಾರ ಸ್ಪಷ್ಟಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ