ಚಿಂಚೋಳಿ ಉಪಚುನಾವಣೆ : ಜಾಧವ್ ಪುತ್ರ ಕಣಕ್ಕೆ!!

ಕಲಬುರ್ಗಿ:

     ಚಿಂಚೋಳಿ ಉಪಚುನಾವಣೆಯಲ್ಲಿ ನನ್ನ ಮಗ ಅವಿನಾಶ ಜಾಧವ್ ಗೆ ಚಿಂಚೋಳಿ ಕ್ಷೇತ್ರದಿಂದ ಟಿಕೆಟ್​ ನೀಡಲು ಬಿಜೆಪಿ ನಿರ್ಧರಿಸಿದೆ ಎಂದು ಕಲಬುರಗಿಯಲ್ಲಿ ಮಾಜಿ ಶಾಸಕ ಉಮೇಶ ಜಾಧವ್ ಹೇಳಿದರು.

      ನನ್ನ ಪುತ್ರ ಅವಿನಾಶ್ ನನ್ನು ಚಿಂಚೋಳಿಯಿಂದ ಸ್ಪರ್ಧೆಗಿಳಿಸುತ್ತಿರೋದು ಪುತ್ರ ವ್ಯಾಮೋಹದಿಂದಲ್ಲ. ಚಿಂಚೋಳಿ ಜನರ ಒತ್ತಾಸೆಯ ಮೇರೆಗೆ ಪುತ್ರನನ್ನು ಚುನಾವಣಾ ಅಖಾಡಕ್ಕಿಳಿಸುತ್ತಿದ್ದೇನೆ. ಇದರಿಂದಾಗಿ ಯಾವುದೇ ಬಿಜೆಪಿ ನಾಯಕರು ಬೇಸರಗೊಂಡಿಲ್ಲ ಎಂದು ಮಾಜಿ ಶಾಸಕ, ಗುಲ್ಬರ್ಗಾ ಲೋಕಸಭೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಸ್ಪಷ್ಟನೆ ನೀಡಿದ್ದಾರೆ.

     ಮಾಜಿ ಸಚಿವ ಸುನಿಲ್ ವಲ್ಯಾಪುರೆ ಅವರೂ ನಮ್ಮೊಂದಿಗಿದ್ದಾರೆ ಅವರು ಚಿಂಚೋಳಿಯಲ್ಲಿ ಬೆಂಬಲಿಗರ ಸಭೆ ಕರೆದಿರೋದು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ರಣತಂತ್ರದ ಕುರಿತು ಚರ್ಚಿಸಲು ವಲ್ಯಾಪುರೆ ಪಕ್ಷ ಬಿಡೋಲ್ಲ, ಯಾರೂ ಬಂಡಾಯವೇಳಲ್ಲ.

      ಚಿಂಚೋಳಿ ಉಪ ಚುನಾವಣೆಯಲ್ಲಿ ಒಗ್ಗಟ್ಟಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರ್ತೇವೆ. ಗುಲ್ಬರ್ಗಾ ಲೋಕಸಭೆ ಮತ್ತು ಚಿಂಚೋಳಿ ವಿಧಾನಸಭೆ ಎರಡರಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ಉಮೇಶ್ ಜಾಧವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link