ಬೆಸ್ಕಾಂ ನಿರ್ಲಕ್ಷ್ಯ : ಜೀವನ್ಮರಣದ ನಡುವೆ ಬಾಲಕ!!

ಬೆಂಗಳೂರು:

      ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಲಕನೋರ್ವ ಸಾವು-ನೋವಿನ ನಡುವೆ ಹೋರಾಟ ನಡೆಸುವಂತಾಗಿದೆ.

     ಸ್ನೇಹಿತರೊಂದಿಗೆ ರಸ್ತೆಯಲ್ಲಿ ಆಟವಾಡುತ್ತಿದ್ದ 9 ವರ್ಷದ ಬಾಲಕ ಸಾಯಿ ಚರಣ್ ವಿದ್ಯುತ್ ಕಂಬದಿಂದ ನೆಲದ ಮೇಲೆ ತುಂಡಾಗಿ ಬಿದ್ದಿದ್ದ ತಂತಿಯನ್ನು ತುಳಿದುವಿದ್ಯುತ್ ಶಾಕ್ ಹೊಡೆಸಿಕೊಂಡು ಗಂಭೀರವಾಗಿ ಗಾಯಗೊಂಡಿದ್ದಾನೆ.

     ತಕ್ಷಣವೇ ಬಾಲಕನನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಐಸಿಯು ಅಲ್ಲಿರುವ ಸಾಯಿ ಚರಣ್​  48 ಗಂಟೆಗಳ ಕಾಲ ಏನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದು,  ಬೆಸ್ಕಾಂ ಇಲಾಖೆಗೆ ನಿರ್ಲಕ್ಷ್ಯದಿಂದಾಗಿ ಪುಟ್ಟ ಬಾಲಕ ಐಸಿಯುನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

      ಕ್ಯಾಬ್​ ಚಾಲಕರಾಗಿರುವ ಬಸವರಾಜ್, ರೇವತಿ ದಂಪತಿ ಹಲವು ವರ್ಷಗಳ ಬಳಿಕ ಸಾಯಿ ಚರಣ್​​ ಹುಟ್ಟಿದ್ದು, ಮಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವುದು ಅವರ ದುಃಖ ಹೆಚ್ಚಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link