ಅಂಬೇಡ್ಕರ್ ಸಮ ಸಮಾಜ ನಿರ್ಮಾಣದ ಸಂದೇಶ ನೀಡಿದ ಮಹಾನ್ ಚೇತನ : ಮಾವಳ್ಳಿ ಶಂಕರ್

ಬೆಂಗಳೂರು

        ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ದೇಶದ ಎಲ್ಲ ವರ್ಗದವರು ಸಮಬಾಳು ಸಮಪಾಲು ಹೊಂದಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಅಧ್ಯಕ್ಷ ಮಾವಳ್ಳಿ ಶಂಕರ್ ತಿಳಿಸಿದರು.ನಗರದಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಏರ್ಪಡಿಸಿದ ಡಾ||ಬಿ.ಆರ್ .ಅಂಬೇಡ್ಕರ್ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕ್ರಾಂತಿಯೋಗಿ ಬಸವಣ್ಣ ವಿಶ್ವಕ್ಕೆ ಶಾಂತಿ ಸಾರಿದರೆ ಬುದ್ದ ಮತ್ತು ಡಾ||ಬಿ.ಆರ್.ಅಂಬೇಡ್ಕರ್ ರವರು ಸಮ ಸಮಾಜ ನಿರ್ಮಾಣದ ಸಂದೇಶ ಸಾರಿದರು ಎಂದರು.

       ಬಿ.ಆರ್.ಅಂಬೇಡ್ಕರ್ ರವರ ನೂರನೆಯ ವರ್ಷಚಾರಣೆಯನ್ನು ಇಂಗ್ಲೆಂಡ್ ನಲ್ಲಿ ಅದ್ದೂರಿಯಾಗಿ ಅಚರಿಸಲಾಯಿತು ವಿಶ್ವಸಂಸ್ಥೆಯವರು ಅಂಬೇಡ್ಕರ್ ಜನ್ಮ ದಿನಾಚರಣೆಯನ್ನು “ಜ್ಞಾನ ದೀನ”ವಾಗಿ ಅಚರಿಸಿ ಗೌರವ ಸಲ್ಲಿಸಿದರು.ಇಂದು ಸಮಾಜದಲ್ಲಿ ಮಹಿಳೆಯರು ಮತದಾನ ಹಕ್ಕಿನಿಂದ ಉನ್ನತ ಸ್ಥಾನ ಅಲಂಕರಿಸಲು ಸಂವಿಧಾನ ಅವಕಾಶ ಕಲ್ಪಿಸಿದೆ .ಸತಿ ಸಹಗಮನ ಪದ್ದತಿ ರದ್ದು ಹಾಗೂ ಶಿಕ್ಷಣ ,ಉದ್ಯೋಗದಲ್ಲಿ ಅವಕಾಶ ಕಲ್ಪಿಸಿ ಶೋಷಿತ ಸಮುದಾಯ ಸಮಾಜದ ಮುಖ್ಯವಾಹಿನಿ ಬರುವಂತೆ ಮಾಡಿದರು ಎಂದರು.

        ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ರವರ ಜೀವನ ಚರಿತ್ರೆ ಪುಸ್ತಕವನ್ನು ಪ್ರತಿ ಮನೆಯಲ್ಲಿ ಇರಬೇಕು , ಮಕ್ಕಳಿಗೆ ಇತಿಹಾಸ ,ಸಂವಿಧಾನ ಮತ್ತು ಡಾ||ಬಿ.ಆರ್ .ಅಂಬೇಡ್ಕರ್ ರವರ ಸಾಧನೆಗಳನ್ನು ತಿಳಿಸಬೇಕು ಎಂದು ಹೇಳಿದರು. ತದನಂತರ ಉಪ ಆಯುಕ್ತೆ ಲಕ್ಷ್ಮೀದೇವಿರವರು ಮಾತನಾಡಿ ಮಹಿಳೆಯರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಾಧನೆ ಮಾಡಲು ಅಂಬೇಡ್ಕರ್ ರವರ ಕೊಟ್ಟ ಸಂವಿಧಾನ ಕಾರಣವಾಗಿದೆ .

        ನ್ಯಾಯಾಂಗ ,ಕಾರ್ಯಂಗ ,ಶಾಸಕಾಂಗ ರೂಪರೇಶೆಗಳು ಮತ್ತು ಮನುಷ್ಯ ಶಾಂತಿ, ಸಹಬಾಳ್ಮೆಯಿಂದ ಬದುಕಲು ಸಹಕಾರಿಯಾಗಿದೆ .ಮತದಾನ ಹಕ್ಕು ,ವಾಕ್ ಸ್ವಾತಂತ್ರ್ಯ ಹಲವಾರು ಕಾನೂನು ರಚನೆಯಿಂದ ಮಹಿಳೆಯರು ಸಹ ಉನ್ನತ ಸ್ಥಾನ ಲಭಿಸಿದೆ .ಡಾ||ಬಿ.ಆರ್.ಅಂಬೇಡ್ಕರ್ ರವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರು ಸಾಗೋಣ ಎಂದು ಹೇಳಿದರು.

        ಅಧ್ಯಕ್ಷ ಅಮೃತ್ ರಾಜ್ ರವರು ಮಾತನಾಡಿ ಡಾ||ಬಿ.ಆರ್.ಅಂಬೇಡ್ಕರ್ ರವರ ಹೋರಟ ಮತ್ತು ಸಂವಿಧಾನ ನಮ್ಮ ಸಂಘ ಅದರ ಹಾದಿಯಲ್ಲಿ ಸಾಗುತ್ತಿದೆ ಬಿ.ಬಿ.ಎಂ.ಪಿ.ಯಲ್ಲಿ ನೌಕರರಿಗೆ ಆನ್ಯಾಯವಾದಾಗ ಮತ್ತು ಸಮಸ್ಯೆ ಬಂದರೆ ನಮ್ಮ ಹೋರಾಟಕ್ಕೆ ಸ್ಪೂರ್ತಿ ಎಂದರೆ ಅಂಬೇಡ್ಕರ್ ರವರು ಎಂದು ಹೇಳಿದರು .

       ಕಾರ್ಯಕ್ರಮದಲ್ಲಿ ಸಮಾಜ ಸೇವಕ ಡಾ||ಸೂರ್ಯಚಂದ್ರ ಮಂಜಣ್ಣ ,ಅಹಿಂದ ಹೋರಟ ಸಮಿತಿ ರಾಜ್ಯಾಧ್ಯಕ್ಷ ಮುತ್ತುರಾಜ್ ಆರೋಗ್ಯಧಿಕಾರಿ ಬಾಲಸುಂದರ್ ಮತ್ತು ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಮೃತ್ ರಾಜ್ ,ಪ್ರಧಾನ ಕಾರ್ಯದರ್ಶಿ ನಲ್ಲಪ್ಪರವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link