ಸಮಾನತೆಗಾಗಿ ಹೋರಾಟ ಮಾಡಿದವರು ಡಾ.ಬಿ.ಆರ್ ಅಂಬೇಡ್ಕರ್

ಮಿಡಿಗೇಶಿ.

       ಇಂದು ಸಮಾಜದ ಸಮಾನತೆಗಾಗಿ ಸಂವಿಧಾನದಲ್ಲಿ ಶೋಷಿತ ಜನತೆ ಹಾಗೂ ಹಿಂದುಳಿದ ವರ್ಗಕ್ಕೆ ಅವಕಾಶ ಮಾಡಿಕೊಟ್ಟಿರುವುದು ಡಾ.ಬಿ.ಆರ್ ಅಂಬೆಡ್ಕರ್ ಎಂದು ನೇರಳೆಕೆರೆ ಗ್ರಾಮ.ಪಂಚಾಯಿತಿಯ ಪಿ.ಡಿ.ಒ ಆರ್,ನಾಗರಾಜು ಡಾ.ಬಿ.ಆರ್. ಅಂಬೇಡ್ಕರ್ 124 ಜಯಂತಿಯ ಅಂಗವಾಗಿ ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿಯ ನೇರಳೆಕೆರೆಯ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಹೇಳಿದರು.

       ಮುಂದುವರಿದು ಮಾತನಾಡಿ ಅಂಬೇಡ್ಕರ್, ಮಹಾತ್ಮಗಾಂಧಿ ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಪ್ರಿಸಿದ್ಧಿ ಪಡೆಯಲು ಅವರ ಆದರ್ಶ ಜೀವನ ಅವರ ಸಿದ್ದಾಂತಗಳೇ ಕಾರಣ ಎಂದು ತಿಳಿಸಿದರು. ಅಂಬೇಡ್ಕರ್‍ರವರು ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ನೀಡಿ ಮೂಲಭೂತ ಸೌಲಭ್ಯ ಪಡೆದೊಕೊಳ್ಳಲು ಅವಕಾಶ ಕಲ್ಪಿಸಿದರು. ಸಂವಿಧಾನದಲ್ಲಿ ಚುನಾವಣಾ ಸಂದರ್ಭದಲ್ಲಿ ರಾಷ್ಟ್ರಪತಿಗೂ ಒಂದೇ ಮತ ಜನ ಸಮಾನ್ಯರಿಗೂ ಒಂದೇ ಮತ ಹಾಕುವ ಅವಕಾಶ ನೀಡಿ ತಮಗೆ ಬೇಕಾದವರನ್ನು ಗೆಲ್ಲಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರು. ಜಗ ಜೀವನರಾಮ್ ರವರು ತಮ್ಮ ಅಧಿಕಾರಾವಧಿಯಲ್ಲಿ ಹಸಿರು ಕ್ರಾಂತಿ ಆಂದೋಲನ ಮಾಡಿ ಇಂದು ಆಹಾರದ ಅಭಾವವಿಲ್ಲದಂತೆ ಮಾಡಿದರು ಎಂದು ತಿಳಿಸಿದರು.

       ಶಿಕ್ಷಕರಾದ ರಮೇಶ ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ದಿನಾಚರಣೆಯ ಸಂದರ್ಭದಲ್ಲಿ ಒಂದಲ್ಲಾ ಒಂದು ತೊಡಕುಗಳು ಸಂಭವಿಸುತ್ತವೆ. ಆದರೂ ಸಹ ಅಂಬೇಡ್ಕರ್ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲೇಬೇಕೆಂದು ತಿಳಿಸಿದರು. ಈ ಸಭೆಯಲ್ಲಿ ಸೇರಿದವರೆಲ್ಲರೂ ಅಂಬೇಡ್ಕರ್ ನೀಡಿದ ಸಂವಿಧಾನದ ಫಲಾನುಭವಿಗಳೇ ಎಂದರು. ಕಾರ್ಮಿಕರಿಗಾಗಿ ನೀತಿಗಳನ್ನು ನಿರೂಪಿಸಿದರು ಜೀತ ಪದ್ಧತಿ ನಿರ್ಮೂಲನೆ ಮಾಡಲು ಅವಕಾಶ ಮಾಡಿಕೊಟ್ಟರು ಎಂದು ತಿಳಿಸದರು.

       ಬಡವನಹಳ್ಳಿ ಪೋಲೀಸ್ ಠಾಣೆಯ ಎ.ಎಸ್.ಐ. ನಾಗರಾಜು ಮಾತನಾಡಿ ಇಂದು ಸಾರ್ವಜನಿಕರು ನೆಮ್ಮದಿಯಾಗಿ ಬಳಾಲು ಡಾ.ಬಿ.ಆರ್ ಅಂಬೇಡ್ಕರ್ ಕಾರಣವೆಂದು ತಿಳಿಸಿದರು. ಇಂದು ಎಸ್.ಸಿ, ಎಸ್.ಟಿ. ಸರ್ಕಾರಿ ಇಲಾಖೆಗಳಲ್ಲಿ ನೌಕರಿ ಪಡೆಯಲು ಡಾ.ಬಿ.ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣ ಎಂದು ತಿಳಿಸಿದರು. ಎಸ್.ಸಿ, ಎಸ್.ಟಿ, ಜನಾಂಗದವರು ಅಂಬೇಡ್ಕರ್ ನಿಗಮದ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಲು ತಿಳಿಸಿದರು.

        ಕರ್ನಾಟಕ ದಲಿತ ಸಂಘ ಸಮಿತಿಯ ಮುಖಂಡರಾದ ಈ ರಂಗನಾಥ್ ರವರು ಪ್ರಸ್ತಾವಿಕ ನುಡಿ ನುಡಿದರು. ಈ ಸಭೆಯಲ್ಲಿ ದಲಿತ ಸಂಘ ಸಮಿತಿಯ ಮುಖಂಡ ಕಣಿಮಯ್ಯ, ಶಿಕ್ಷಕರಾದ ನಾರಾಯಣಪ್ಪ, ಕೆಂಪಣ್ಣ, ಮಾತನಾಡಿದರು, ವಕೀಲರಾದ ನಾಗರಾಜು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಶಿವಣ್ಣ, ಗ್ರಾಮ ಪಂಚಾಯಿತಿಯ ಸದಸ್ಯರಾದ ರಮೇಶ್ ಹಾಗೂ ಬರಹಗಾರರಾದ ಎನ್.ಎಸ್.ಈಶ್ವರ ಪ್ರಸಾದ್, ದಲಿತ ಮುಖಂಡರಾದ ನರಸಿಂಹಯ್ಯ, ಕೃಷ್ಣಪ್ಪ, ಮಂಜುನಾಥ್, ಕೆಂಪಣ್ಣ, ಎ.ಕೆ. ಶಿವಕುಮಾರ್, ಉಪಸ್ಥಿತಿ ಇದ್ದು, ಸ್ವಾಗತ ಎನ್.ಆರ್ ಅಂಬೇಡ್ಕರ್ ಮಾಡಿದರು. ವಂದನಾರ್ಪಣೆ ನಟರಾಜು ಮೌರ್ಯ ಮಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap