ಮಹನೀಯರ ಜಯಂತಿ :ಸರಳ ಆಚರಣೆಗೆ ನಿರ್ಧಾರ

ಚಿತ್ರದುರ್ಗ:

     ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಿವಿಧ ಮಹನೀಯರ ಜಯಂತಿ ಆಚರಣೆ ಸರಳವಾಗಿ ಆಚರಿಸ ಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ ಹೇಳಿದರು. ಅವರು(ಏ.30) ರಂದು ಉಪವಿಭಾಗಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ವಿವಿಧ ಮಹನೀಯರ ಜಯಂತಿ ಆಚರಣೆ ಕುರಿತು ಏರ್ಪಡಿಸಿದ್ದ ಪೂವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಕರ್ನಾಟಕದಲ್ಲಿ ಎರಡು ಹಂತದ ಲೋಕಸಭಾ ಚುನಾವಣೆ ಮುಗಿದಿದ್ದರೂ, ಭಾರತದಲ್ಲಿ ಒಟ್ಟು 7 ಹಂತದಲ್ಲಿ ಚುನಾವಣೆ ಇರುವುದರಿಂದ ನಾಲ್ಕನೇ ಹಂತದ ಚುನಾವಣೆ ಸದ್ಯ ಮುಗಿದಿದೆ. ಉಳಿದ 3 ಹಂತದ ಚುನಾವಣೆಗಳು ಇನ್ನೂ ಬಾಕಿ ಇರುವುದರಿಂದ ಭಾರತ ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಕರ್ನಾಟಕದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ನೀತಿ ಸಂಹಿತೆ ಮೇ 25 ರ ಬಳಿಕ ಕೊನೆಗೊಳ್ಳುವುದರಿಂದ ವಿವಿಧ ಮಹನೀಯರ ಜಯಂತಿ ಆಚರಣೆಯನ್ನು ಜಿಲ್ಲೆಯಲ್ಲಿ ಸರಳವಾಗಿ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿಯೇ ಆಚರಿಸಲಾಗುವುದು ಎಂದು ಹೇಳಿದರು.

    ಮೇ.7 ರಂದು ಜಗಜ್ಯೋತಿ ಬಸವೇಶ್ವರರ ಜಯಂತಿ, ಮೇ.9 ರಂದು ಶಂಕರಚಾರ್ಯರ ಜಯಂತಿ, ಮೇ.10 ರಂದು ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಹಾಗೂ ಮೇ.11 ರಂದು ಭಗೀರಥ ಜಯಂತಿ ಸರಳವಾಗಿ ಆಚರಿಸಲಾಗುತ್ತದೆ. ಮಹನೀಯರ ಜಯಂತಿ ದಿನದಂದು ಆಯಾ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಅವರ ಕುರಿತು ವಿಶೇಷ ಉಪನ್ಯಾಸ ಸರಳ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗುವುದೆಂದು ಸಭೆಯಲ್ಲಿ ಹೇಳಿದರು.

     ಸಭೆಯಲ್ಲಿ ಉಪವಿಭಾಗಾಧಿಕಾರಿ ವಿಜಯ್ ಕುಮಾರ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ತಹಶೀಲ್ದಾರ್ ನಹೀದ ಜಂ ಜಂ, ಡಿಡಿಪಿಐ ಎ.ಜೆ ಆಂಥೋನಿ ಹಾಗೂ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link