ಚಿತ್ರದುರ್ಗ:
ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮಾನವೀಯ ಮೌಲ್ಯಗಳು ಹಾಗೂ ಶೈಕ್ಷಣಿಕ ಚಟುವಟಿಕೆಯ ಜೊತೆಗೆ ಸ್ವಾವಲಂಬನೆ ಬದುಕು ಅಗತ್ಯವಾಗಿ ಬೇಕಾಗಿದೆ ಎಂದು ಚಂದ್ರವಳ್ಳಿಯ ಎಸ್ ಎಸ್.ಜೆ.ಎಂ. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಕೆ.ಸಿ.ರಮೇಶ್ರವರು ತಿಳಿಸಿದರು.
ಚಂದ್ರವಳ್ಳಿ ಎಸ್.ಜೆ.ಎಂ.ಕಾಲೇಜಿನ ಜಯದೇವ ಸಭಾಂಗಣದಲ್ಲಿ ಸೋಮವಾರ ನಡೆದ ಅಂತಿಮ ಬಿಕಾಂ. ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ ಪದವಿ ಮುಗಿದ ನಂತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ಉದ್ಯೋಗ ಸಾಕಷ್ಟು ಇವೆ ವಿನಾಕರಣ ಯಾವುದೇ ಕೆಲಸವಿಲ್ಲವೆಂದು ಮನೆಯಲ್ಲಿ ಇರಬಾರದು ನಿಮಗೆ ಅಸಕ್ರಿ ಇರುವುದನ್ನು ಅಯ್ಕೆ ಮಾಡಿಕೊಳ್ಳಬೇಕು.
ಸರ್ಕಾರಿ ಕೆಲಸ ಅವಲಂಬಿಸದೇ ಸ್ವ ಉದ್ಯೋಗವನ್ನು ಅಯ್ಕೆ ಮಾಡಿಕೊಳ್ಳಿ ಸುಂದರ ಜೀವನ ನಿರ್ಮಾಣಾ ಮಾಡಿಕೊಳ್ಳಿ ಮುಂದಿನ ದಿನಗಳಲ್ಲಿ ಬದುಕು ಕಟ್ಟುಕೊಳ್ಳುವ ಶಿಕ್ಷಣಕ್ಕೆ ಆದ್ಯತೆ ನೀಡಿ ಸ್ವಾವಲಂಬನೆ ಜೀವನ ನಿಮ್ಮದಾಗಲಿ ಮೊಬೈಲ್ ಹಾಗೂ ದುಶ್ಚಟದಿಂದ ದೂರವಿದ್ದು ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಬೇಕು ಸ್ಪರ್ಧಾತ್ಮಕ ಯುಗದಲ್ಲಿ ವೃತ್ತಿ ಕೌಶಲ್ಯತೆ.
ಸಂಹವನ ಕಲೆ, ಶಿಸ್ತು ಶ್ರದ್ದೆ ಇದ್ದರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಸಮಾಜಕ್ಕೆ ಹಾಗೂ ಕುಟಂಬಕ್ಕೆ ಮಾರಕವಾಗದೇ ಉತ್ತಮ ವ್ಯಕ್ತಿಗಳಾಗಬೇಕೆಂದು ತಿಳಿಸಿದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಾಣೀಜ್ಯ ವಿಭಾಗದ ಮುಖ್ಯಸ್ಥರಾದ ಪ್ರೋ|| ಹೆಚ್.ಕೆ.ಶಿವಪ್ಪ, ಮಾತನಾಡಿ ಪ್ರಾದ್ಯಾಪಕರಾದ ಆರ್.ವಿ.ಹೆಗಡಾಳ್, ಬಿ.ಎಂ.ಸ್ವಾಮಿ, ಬಸವರಾಜ್, ಮೋಹನ್, ಪ್ರೋ|| ಪಿ.ಲಿಂಗಪ್ಪ ಮಾತನಾಡಿದರು.
ವಿದ್ಯಾರ್ಥಿನಿ ನಾಗಶ್ರೀ ಸ್ವಾಗತಿಸಿ ವಂದಿಸಿದರು. ವಿದ್ಯಾರ್ಥಿನಿ ಭೂಮಿಕ ಸ್ವಾಗತಿಸಿ ವಂದಿಸಿದರು ನಂತರ ವಿದ್ಯಾರ್ಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಿದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








