ಹಿರಿಯೂರು ತಾಲ್ಲೂಕಿನ 10 ಶಾಲೆಗಳಿಗೆ ಶೇ 100ರಷ್ಟು ಫಲಿತಾಂಶ

ಹಿರಿಯೂರು :

      2018-19ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೇಯಲ್ಲಿ ತಾಲ್ಲೂಕಿನ ಸುಮಾರು 10 ಶಾಲೆಗಳು ಶೇ 100 ಫಲಿತಾಂಶ ಪಡೆಯುವ ಮೂಲಕ ವಿನೂತನ ದಾಖಲೆ ನಿರ್ಮಿಸಿವೆ ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ.ನಟರಾಜ್ ತಿಳಿಸಿದ್ದಾರೆ.

      ನಗರದ ರಾಷ್ಟೀಯ ಅಕಾಡೆಮಿ ಶಾಲೆ, ಶ್ರೀನಿವಾಸ್ ಬಡಾವಣೆಯ ಯಾಜ್ಞವಲ್ಯ್ಕ ಶಾಲೆ, ಮೋಕ್ಷಗುಂಡಂ ವಿಶ್ವೇಶ್ವರಯ್ಯ ಪ್ರೌಢಶಾಲೆ, ವಾಗ್ದೇವಿಅಂಗ್ಲ ಮಾಧ್ಯಮ ಶಾಲೆ, ಬಸವರಾಜ ಪ್ರೌಢಶಾಲೆ, ಪ್ರೆಸಿಡೆನ್ಸಿಶಾಲೆ, ಸಂತ ಅನ್ನಮ್ಮ ಪ್ರೌಢಶಾಲೆ, ಪಿಲ್ಲಾಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆ, ದೇವರಕೊಟ್ಟ ಗ್ರಾಮದ ಮೊರಾರ್ಜಿ ವಸತಿ ಶಾಲೆ ಎಸ್.ಸಿ ಮತ್ತು ಎಸ್.ಟಿ ಶಾಲೆಗಳು ಶೇ 100 ಫಲಿತಾಂಶ ಪಡೆದ ಕೀರ್ತಿಗೆ ಪಾತ್ರವಾಗಿವೆ.

       ನಗರದ ರಾಷ್ಟೀಯ ಅಕಾಡೆಮಿ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 92 ವಿದ್ಯಾರ್ಥಿಗಳ ಪೈಕಿ 70 ವಿದ್ಯಾರ್ಥಿಗಳು ಉನ್ನತ ಶೇಣಿಯಲ್ಲಿ 22 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಎಂದು ಸಂಸ್ಥೆಯ ಮುಖ್ಯಸ್ಥ ತಿರುಮೂರ್ತಿ ತಿಳಿಸಿದ್ದಾರೆ.

ಮೋಕ್ಷಗುಂಡಂ ಶಾಲೆ :

        ಮೋಕ್ಷಗುಂಡಂ ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 49 ವಿದ್ಯಾರ್ಥಿಗಳ ಪೈಕಿ 23 ಉನ್ನತ ಶ್ರೇಣಿ, 26 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತೀರ್ಣರಾಗಿದ್ದಾರೆ. ಮಾನ್ವಿ ಎಂ.ಲಿಂಗಂ 607, ಪಿ.ರಾಜೇಶ್ 600 ಹಾಗೂ ಎಂ.ಪ್ರಜ್ಜಲ್ 600 ಅಂಕ ಗಳಿಸಿದ್ದಾರೆ ಎಂಬುದಾಗಿ ಸಂಸ್ಥೆ ಅಧ್ಯಕ್ಷ ಜಗದೀಶ್ ದರೇದಾರ್ ತಿಳಿಸಿದ್ದಾರೆ.

 ಯಾಜ್ಞವಲ್ಕ್ಯ ಶಾಲೆ :

      ನಗರದ ಶ್ರೀನಿವಾಸ ಬಡಾವಣೆಯಲ್ಲಿರುವ ಯಾಜ್ಞವಲ್ಕ್ಯ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 25 ವಿದ್ಯಾರ್ಥಿಗಳಲ್ಲಿ 9 ಉನ್ನತ ಶ್ರೇಣಿ 14 ಪ್ರಥಮ ಹಾಗೂ ಇಬ್ಬರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂಬುದಾಗಿ ಸಂಸ್ಥೆ ಅಧ್ಯಕ್ಷ ಸುರೇಶ್ ತಿಳಿಸಿದ್ದಾರೆ.

ವಾಣಿವಿಲಾಸ ಆಂಗ್ಲ ಮಾಧ್ಯಮ ಪ್ರೌಢಶಾಲೆ :

       ನಗರದ ಹೃದಯಭಾಗದಲ್ಲಿರುವ ವಾಣಿವಿಲಾಸ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 18 ವಿದ್ಯಾರ್ಥಿಗಳ ಪೈಕಿ 6 ಅತ್ಯುನ್ನತ ಶ್ರೇಣಿ ಹಾಗೂ 11 ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಆಲೂರುಹನುಮಂತರಾಯಪ್ಪರವರು ತಿಳಿಸಿದ್ದಾರೆ.

ಬಸವರಾಜ ಪ್ರೌಢಶಾಲೆ :

       ನಗರದ ಹೊರವಲಯದಲ್ಲಿರುವ ಬಸವರಾಜ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 24 ವಿದ್ಯಾರ್ಥಿಗಳ ಪೈಕಿ 7 ಅತ್ಯುನ್ನತ ಶ್ರೇಣಿ ಹಾಗೂ 17 ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥ ಸಚಿನ್‍ಗೌಡ ತಿಳಿಸಿದ್ದಾರೆ.

ಮೊಂಟೆಸ್ಸೊರಿ ಪ್ರೌಢಶಾಲೆ :

        ಇಲ್ಲಿ ಪರೀಕ್ಷೆಗೆ ಹಾಜರಾಗಿದ್ದ 26 ವಿದ್ಯಾರ್ಥಿಗಳಲ್ಲಿ 25 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 10 ಅತ್ಯುನ್ನತ ಶ್ರೇಣಿ, 11 ಪ್ರಥಮ ಹಾಗೂ 04 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂಬುದಾಗಿ ಸಂಸ್ಥೆಯ ಕಾರ್ಯದರ್ಶಿ ವೀರಕರಿಯಪ್ಪ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap