ಮಸೂದ್ ಅಜರ್ ವಿಷಯದಲ್ಲಿ ಇಕ್ಕಟ್ಟಿಗೆ ಸಿಲುಕಿದ ಚೀನಾ..!!

ಬೀಜಿಂಗ್:
 
     ನೆರೆಯ ಪಾಕಿಸ್ತಾನದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಅನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವ ಹಿನ್ನಲ್ಲೇ ಭಾರತ ನೀಡಿರುವ ಹೊಸ ಸಾಕ್ಷ್ಯಾಧಾರಗಳು ಚೀನಾಕ್ಕೆ ಸಹ ಒಪ್ಪಿಗೆಯಾದಂತೆ ಕಾಣುತ್ತಿದೆ. ಇಷ್ಟು ವರ್ಷಗಳ ಕಾಲ ತಕರಾರು ತೆಗೆಯುತ್ತಿದ್ದ ಚೀನಾ ಕೊನೆಗೂ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ ಇದರಿಂದಾಗಿ ಚಿನಾ ಇಕ್ಕಟಿಗೆ ಸಿಲುಕಿದಂತಾಗಿದೆ.
      ಭಾರತ ಒದಗಿಸಿರುವ ಸಾಕ್ಷ್ಯಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ನಂತರ ಮತ್ತು ಸಂಬಂಧಪಟ್ಟ ಪಕ್ಷಗಳ ಅಭಿಪ್ರಾಯಗಳನ್ನು ಪರಿಗಣಿಸಿದ ನಂತರ ಭಾರತದ ಪ್ರಸ್ತಾವನೆಗೆ ಚೀನಾ ಆಕ್ಷೇಪವೆತ್ತುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.
     ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಇದಕ್ಕೂ ಮುನ್ನ ಚೀನಾ ವಿದೇಶಾಂಗ ಕಾರ್ಯದರ್ಶಿ ವಾಂಗ್ ಯಿ ಅವರನ್ನು ಭೇಟಿ ಮಾಡಿ ಮೌಲಾನ ಮಸೂದ್ ಅಜರ್ ಅನ್ನು ಜಾಗತಿಕ ಭಯೋತ್ಪಾದಕ ಎಂದು ಕಪ್ಪುಪಟ್ಟಿಗೆ ಸೇರಿಸುವ ಕುರಿತು ಚರ್ಚೆ ನಡೆಸಿದ್ದರು. ಈ ಸಂಬಂಧ ಅಜರ್ ವಿರುದ್ಧ ಇರುವ ಎಲ್ಲಾ ರೀತಿಯ ಸಾಕ್ಷ್ಯಾಧಾರಗಳನ್ನು ಅವರು ಚೀನಾಕ್ಕೆ ಒದಗಿಸಿದ್ದರು ಎನ್ನಲಾಗಿದೆ.
      ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಭಾರತ, ಅಮೆರಿಕಾ ಮತ್ತು ಇನ್ನೂ ಬೇರೆ ಬೇರೆ ದೇಶಗಳು ಒದಗಿಸಿದ್ದ ಎಲ್ಲಾ ದಾಖಲೆಗಳು, ಸಾಕ್ಷ್ಯಾಧಾರಗಳನ್ನು ಚೀನಾ 2009ರಿಂದಲೇ ತಿರಸ್ಕರಿಸುತ್ತಾ ಬಂದಿತ್ತು.ಬೇರೆ ರಾಷ್ಟ್ರಗಳ ನಿರ್ಣಯಕ್ಕೆ ಚೀನಾ ಈ ಹಿಂದೆ ನಾಲ್ಕು ಬಾರಿ ತಾಂತ್ರಿಕವಾಗಿ ತಡೆಯೊಡ್ಡಿತ್ತು. ಸಾಕ್ಷ್ಯಾಧಾರಗಳ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯವಿದೆ ಎಂದು ಖ್ಯಾತೆ ತೆಗೆದಿತ್ತು. ಅಮೆರಿಕಾ ಮತ್ತು ಇಂಗ್ಲೆಂಡಿನ ಸಹಮತವಿದ್ದ ಫ್ರಾನ್ಸ್ ಸರ್ಕಾರದ ನಿರ್ಣಯವನ್ನು ಚೀನಾ ಕಳೆದ ಮಾರ್ಚ್ 13ರಂದು ತಾಂತ್ರಿಕ ತಡೆ ನೀಡಿತ್ತು. ಆದರೆ ನೀಡಿದ್ದ ತಡೆಯನ್ನು ಚೀನಾ ನಿನ್ನೆ ಹಿಂಪಡೆದಿದೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link