ದಾವಣಗೆರೆ:
ಬೇಸಿಗೆ ಪ್ರಯುಕ್ತ ಒಂದು ತಿಂಗಳ ಪರ್ಯಂತ ಕರುಣಾ ಜೀವ ಕಲ್ಯಾಣ ಟ್ರಸ್ಟ್‍ನಿಂದ ಹಮ್ಮಿಕೊಂಡಿದ್ದ ಉಚಿತ ಮಜ್ಜಿಗೆ ವಿತರಣೆ ಕಾರ್ಯಕ್ರಮವು ಗುರುವಾರ ಮುಕ್ತಾಯಗೊಂಡಿದೆ.ನಗರದ ರಾಮ್ ಅಂಡ್ ಕೋ ವೃತ್ತದಲ್ಲಿ ನಡೆದ ಉಚಿತ ಮಜ್ಜಿಗೆ ವಿತರಣೆ ಮುಕ್ತಾಯ ಕಾರ್ಯಕ್ರಮದಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ಏಪ್ರಿಲ್ 1ರಿಂದ ಈವರೆಗೆ ಸತತವಾಗಿ ಒಂದು ತಿಂಗಳ ಪರ್ಯಂತ ನಗರದ ನಾಲ್ಕು ಸ್ಥಳಗಳಲ್ಲಿ ಉಚಿತ ಮಜ್ಜಿಗೆ, ನೀರು ವಿತರಿಸಲಾಗಿದೆ. ಈ ಪುಣ್ಯ ಕಾರ್ಯಕ್ಕೆ ದಾನಿಗಳ ಸಹಕಾರ ಮರೆಯುವಂತಿಲ್ಲ ಎಂದರು.
ದಾನಿಗಳು ಕೊಟ್ಟ ಹಣದಿಂದಲೇ ಇಂತಹದ್ದೊಂದು ಸೇವಾ ಕಾರ್ಯ ಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲೂ ಇದೇ ರೀತಿಯಲ್ಲಿ ದಾನಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು.ಟ್ರಸ್ಟಿನ ನಿರ್ದೇಶಕಿ ಮಂಜುಳಾ ಬಸವಲಿಂಗಪ್ಪ, ದಾನಿ ಗುರುಶಾಂತಪ್ಪ ಹಾಗೂ ಟ್ರಸ್ಟಿನ ಕಾರ್ಯಕರ್ತರು, ಸಾರ್ವಜನಿಕರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ