ಮಧುಗಿರಿ:
ನಮ್ಮ ಪೂರ್ವಜರು ನಡೆಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ಪಾಲಿಸುವುದು ನಮ್ಮೆಲ್ಲರ ಜವಬ್ದಾರಿ ಎಂದು ತಾಲ್ಲೂಕು ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ತಿಳಿಸಿದರು.
ತಾಲ್ಲೂಕಿನ ಮಾಡಗಾನಹಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹೊರಬೀಡು ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಮಾರು 14 ವರ್ಷಗಳ ನಂತರ ಗ್ರಾಮದಲ್ಲಿ ಆಚರಿಸಲಾಗುತ್ತಿದೆ. ನಮ್ಮ ಪೂರ್ವಿಕರ ಕಾಲದಿಂದಲ್ಲೂ ಕೂಡ ಹೊರ ಬೀಡನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ಆಚರಣೆಯನ್ನು ಎರಡು ಅಥವಾ ಮೂರು ವರ್ಷಕೊಮ್ಮೆ ಆಚರಿಸುತ್ತಿದ್ದು, ಗ್ರಾಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಬಾರದು ಹಾಗೂ ಉತ್ತಮ ಮಳೆ ಬೆಳೆಯಾಗಲಿ ಎಂಬುದು ಪದ್ಧತಿ.
ಈ ಆಚರಣೆಯ ದಿವಸ ಬೆಳಗ್ಗೆ 6ಗಂಟೆಗೆ ಎಲ್ಲರೂ ಗ್ರಾಮವನ್ನು ತೊರೆದು ತಮ್ಮ ಹೊಲಗಳಲ್ಲಿ ಸಂಜೆ 6ರ ವರೆವಿಗೂ ಕಾಲ ಕಳೆಯುತ್ತೇವೆ. ನಂತರ ಎಲ್ಲರೂ ಸ್ನಾನ ಮಾಡಿಕೊಂಡು ಗ್ರಾಮ ಮುತ್ತುರಾಯ ಸ್ವಾಮಿ, ಜುಂಜುಪ್ಪ, ಭೂತಪ್ಪ, ಬಸವನಗುಡ್ಡೆ ದೇವರುಗಳಿಗೆ ಪೂಜೆ ಸಲ್ಲಿಸಿ, ಗೋವನ್ನು ಮೊದಲು ಗ್ರಾಮಕ್ಕೆ ಕಳುಹಿಸಿ ನಂತರ ಎಲ್ಲರೂ ಗ್ರಾಮಕ್ಕೆ ತೆರಳುತ್ತೇವೆ ಎಂದರು.
ಆಚರಣೆಯಲ್ಲಿ ತಾಲ್ಲೂಕು ಯಾದವ ಯುವ ವೇದಿಕೆಯ ಅಧ್ಯಕ್ಷ ಈರಣ್ಣ, ಹಿರಿಯ ಮುಖಂಡರುಗಳಾದ ಮಾಲೀಮರಿಯಪ್ಪ, ಚಿಕ್ಕಕರಿಯಪ್ಪ, ತಿಮ್ಮಣ್ಣ, ನಾಗಭೂಷಣ್, ಪಾಪೀರಣ್ಣ, ಸಣ್ಣಮ್ಮ, ಕರಿಯಣ್ಣ, ಅಯ್ಯ, ಸಣ್ಣಪ್ಪ, ಗಿರೀಶ್, ಮರಿಯಪ್ಪ, ಶ್ರೀರಂಗ, ನಂಜುಂಡ, ಉಮೇಶ್, ಮೂರ್ತಿಯಾದವ್, ಬಸವರಾಜು, ರಾಜು, ಶಿವಮ್ಮ, ಕದುರಮ್ಮ, ತಿಮ್ಮಯ್ಯ, ರಂಗಣ್ಣ ಮುಂತಾದವರು ಹಾಜರಿದ್ದರು.