ಹಾವೇರಿ :
ಕನಕಗುರುಪೀಠದ ಶಾಖಾ ಮಠವನ್ನು ಶ್ರೀ ಕ್ಷೇತ್ರ ಮೈಲಾರದಲ್ಲಿ ಸ್ಥಾಪನೆ ಮಾಡಲಾಗಿದ್ದು , ಮೇ 7ರಂದು ಏಳುಕೋಟಿ ಭಕ್ತರ ಕುಟೀರವು ಲೋಕಾರ್ಪಣೆಗೊಳ್ಳಲಿದೆ. ಅಂದು ಸ್ಥಿರಬಿಂಬ ಸ್ಫಟಿಕ ಶಿವಲಿಂಗ ಪ್ರತಿಷ್ಠಾಪನೆ,ಹಾಗೂ ಸಾಮೂಹಿಕ ವಿವಾಹ ಮಹೋತ್ಸವ ಸೇರದಂತೆ ಮೂರು ದಿನಗಳವರೆಗೆ ಶ್ರೀ ಕ್ಷೇತ್ರ ಮೈಲಾರದಲ್ಲಿ ಅದ್ದೂರಿ ಕಾರ್ಯಕ್ರಮಗಳು ಜರುಗಳಿವೆ.
ಅಂದು ಹಾವೇರಿಯಲ್ಲಿ ಕನಕಾಭಿಮಾನಿಗಳಿಂದ ಬೈಕ್ RALLY
ಜಿಲ್ಲೆಯ ಹಾಲುಮತ ಕುರುಬ ಸಮುದಾಯದ ವತಿಯಿಂದ ಮೇ.7 ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಹಾವೇರಿ ಶಹರದ ಮುರಘಾರಾಜೇಂದ್ರ ಮಠದಿಂದ ಮೈಲಾರದ ವರಗೆ ಬೈಕ RALLY ಹೊರಡಲಿದೆ.
ಹಾವೇರಿ ಶಹರದಿಂದ ಹೊರಡುವ ಈ ಬೈಕ್ RALLYಯಲ್ಲಿ ಜಿಲ್ಲೆಯ ಕನಕಾಭಿಮಾನಿಗಳು ಜಿಲ್ಲಾ ಕುರುಬ ಸಂಘದ ಪದಾಧಿಕಾರಿಗಳು ಸಮಾಜದ ಮುಖಂಡರು ಗಣ್ಯರು ಭಾಗವಹಿಸಿ ಈ RALLYಯನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಮಾರುತಿ ಹರಿಹರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಗೌಡ ಗಾಜೀಗೌಡ್ರ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ