ತಂತ್ರಜ್ಞಾನದ ಜೊತೆಗೆ ನಾವು ಸಾಗಬೇಕು : ತ್ರಿವಿಕ್ರಂ ರಾವ್

ತಿಪಟೂರು :

     ನಾವಿರುವ ಈಗಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಈಗಿನ ತಂತ್ರಜ್ಞಾನದೊಂದಿಗೆ ನಾವು ಸಾಗಿದರೆ ಮಾತ್ರ ಅಭಿವೃದ್ಧಿಹೊಂದಲು ಸಾಧ್ಯವೆಂದು ಮೈಕ್ರೋಸಾಫ್ಟ್ – ಪ್ಲಾಟಿಫಿ ಸೆಲ್ಯೂಷನ್‍ನ ಸಂಸ್ಥಾಪಕ ಮತ್ತು ಸಿ.ಇ.ಓ ವಿ.ತ್ರಿವಿಕ್ರಂ ರಾವ್ ವಿದ್ಯಾರ್ಥಿಗಳಿಗೆ ಕರೆನೀಡಿದರು.

     ನಗರದ ಕಲ್ಪತರು ತಾಂತ್ರಿಕ ವಿದ್ಯಾನಿಲಯದಲ್ಲಿ ಇಂದು ಏರ್ಪಡಿಸಿದ್ದ ಆಲ್ಟ್ರನೇಟ್ ಇಂಟಲಿಜೆನ್ಸ್ ಮತ್ತು ಮೆಕಾನಿಕ್ ಲರ್ನಿಂಗ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ತಂತ್ರಜ್ಞಾನದೊಂದಿಗೆ ಸಾಗಿದರೆ ಮಾತ್ರ ನಾವು ಏನನ್ನಾದರೂ ಸಾಧಿಸಬಹುದು ನಾವಿಂದು ಉದ್ಘಾಟಿಸುತ್ತಿರುವ ಈ ಲ್ಯಾಬ್ ವಿ.ಟಿ.ಯು ಮತ್ತು ಕರ್ನಾಟಕದಲ್ಲೇ ಪ್ರಥಮವಾದು ಈ ಲ್ಯಾಬ್‍ನಲ್ಲಿ ನೀವುಗಳು ಇಂದು ಪ್ರಯೋಗಾಲಯದಲ್ಲಿ ಪಡೆಯುವ ಕಂಪ್ಯೂಟರ್ ಮತ್ತೆ ನಿಮಗೆ ಅದೇ ಸಿಗುವುದಿಲ್ಲ ಮತ್ತು ಅವುಗಳಲ್ಲಿರುವ ತಂತ್ರಾಂಶಗಳು ಈಗಿನ ದಿನಗಳಲ್ಲಿ ಬದಲಾಗುತ್ತಿಲ್ಲ ಆದರೆ ಮೈಕ್ರೋಸಾಫ್ಟ್ ಕಂಪನಿಯ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಲಾಗಿನ್ ಐ.ಡಿ. ಸೃಷ್ಠಿಸಿಕೊಂಡು ಅವರಿಗೆ ಬೇಕಾದಂತೆ ಅವರದೇ ಆದ ಕಂಪ್ಯೂಟರ್ ಅನ್ನು ಮತ್ತು ಬೇಕಾದ ತಂತ್ರಾಂಶಗಳನ್ನು ಮತ್ತು ಪಡೆದುಕೊಂಡು ತಮ್ಮ ಸಂಶೋಧನೆಯನ್ನು ಮಾಡಿಕೊಂಡು ತಾವುಗಳು ಅಭಿವೃದ್ಧಿಹೊಂದುವುದರ ಜೊತೆಗೆ ದೇಶದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಕರೆನೀಡಿದರು.

      ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಪಿ.ಕೆ.ತಿಪ್ಪೇರುದ್ರಪ್ಪ ಮಾತನಾಡುತ್ತ ನಾವು ಹಲವಾರು ಸಂಸ್ಥೆಗಳ ಜೊತೆ ಕೈಜೋಡಿಸಿ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಏನನ್ನು ಬೇಕಾದರೂ ಮಾಡುತ್ತೇವೆ ವಿದ್ಯಾರ್ತಿಗಳು ಇವುಗಳನ್ನು ಉಪಯೋಗಿಸಿಕೊಂಡು ಕಾಲೇಜಿಗೆ, ಪೋಷಕರಿಗೆ ಮತ್ತು ರಾಷ್ಟ್ರಕ್ಕೆ ಕೀರ್ತಿತರುವಂತಹ ಕಾರ್ಯವನ್ನು ಮಾಡಬೇಕೆಂದರು.

      ಪ್ರಾಂಶುಪಾಲರಾದ ನಂದೀಶಯ್ಯ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಸಂಸ್ಥೆಯು ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದು ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಂಡು ಮೈಕ್ರೋಸಾಫ್ಟ್ ಸಂಸ್ಥೆಯವರು ಗಾರ್ಗಿ ಎಂಬ ಚಾಟ್‍ಅನ್ನು ಅಭಿವೃದ್ಧಿಪಡಿಸಿದ್ದು ಇದರಲ್ಲಿ 1.20 ಲಕ್ಷ ವಿದ್ಯಾರ್ಥಿಗಳಿದ್ದು ಒಂದು ಬಾರಿಗೆ 1ಲಕ್ಷ ಪ್ರಶ್ನೆಗಳು ಉದ್ಭವಿಸುತ್ತವೆ, ಅದಕ್ಕೆ ಕ್ಷಣಾರ್ಧದಲ್ಲೆ ಎಲ್ಲಾಕಡೆಯಿಂದ ಉತ್ತರಗಳು ಲಭಿಸುತ್ತಿದ್ದು ಇದು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ತುಂಬಾ ಅನುಕೂಲವಾಗಿದೆ ಎಂದರು.

     ಕಾರ್ಯಕ್ರಮದಲ್ಲಿ ಮೈಕ್ರೋಸಾಫ್ಟ್‍ನ ನಿರ್ದೇಶಕರಾದ, ಕುಶಲೇಂದ್ರ್ರ ಸಿಂಗ್, ಅಮಿತ್ ದಾರ್, ನಿರ್ದೇಶಕರು, ಮತ್ತು ಬಿಸಿನೆಸ್ ಡೆವಲ್ಪ್‍ಮೆಂಟ್ ಮೈಕ್ರೋಸಾಫ್ಟ್- ಪ್ಲಾಟಿಫಿ ಸೆಲ್ಯೂಷನ್‍ನ ಅಭಿರಾಮ್ ಎ ರಂನಗನಾಥ್, ಸಂಸ್ಥೆಯ ಪದಾಧಿಕಾರಿಗಳಾದ ಎಸ್.ಎಸ್.ನಟರಾಜು, ಎ.ಎಂ.ಚಂದ್ರಶೇಖರಯ್ಯ, ಜಿ.ಕೆ.ಪ್ರಭು, ಟಿ.ಎಸ್.ಶಿವಪ್ರಸಾದ್, ಕೆ.ಪಿ ರುದ್ರಮುನಿಸ್ವಾಮಿ, ಟಿ.ಯು ಜಗದೀರ್ಶಮೂರ್ತಿ,

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link