ತಿರುಪತಿಯ 1 ಲಕ್ಷ ಹಣ, 1.5 ಕೆ.ಜಿ.ಬೆಳ್ಳಿ ಕಿರೀಟ ಕಳವು!!

ಕೋಲಾರ :

      ಕರ್ನಾಟಕದ ತಿರುಪತಿ ದೇವಾಲಯ ಎಂದೇ ಹೆಸರುವಾಸಿಯಾಗಿರುವ ವೆಂಕಟರವಣ ಸ್ವಾಮಿ ದೇವಾಲಯದಲ್ಲಿ ರಾತ್ರಿ ಕಿಡಿಗೇಡಿಗಳು ಹುಂಡಿ ಕಳವು ಮಾಡಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.

      ಶ್ರೀನಿವಾಸಪುರ ತಾಲ್ಲೂಕಿನ ಗನಿಬಂಡೆ ವೆಂಕಟರವಣ ದೇವಾಲಯಕ್ಕೆ ನುಗ್ಗಿದ ಕಳ್ಳರು, ಹುಂಡಿ ಹೊಡೆದು ಸುಮಾರು 1 ಲಕ್ಷಕ್ಕೂ ಹೆಚ್ಚು ಹಣ ಮತ್ತು ದೇವರ ಮೇಲೆ ಅಲಂಕರಿಸಿದ್ದ 1.5 ಕೆ.ಜಿ. ಬೆಳ್ಳಿ ಕಿರೀಟವನ್ನು ಹೊತ್ತೊಯ್ದಿದ್ದಾರೆ. 

      ಎಂದಿನಂತೆ ಬೆಳಿಗ್ಗೆ ಪೂಜಾರಿ ಶ್ರೀನಾಥ್ ದೇವಾಲಯದ ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ರಾಯಲ್ಪಾಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link