ಚಿಕ್ಕಬಳ್ಳಾಪುರ :
ಎಂಗೇಜ್ಮೆಂಟ್ ಆಗಿ ಮದುವೆ ನಿಶ್ಚಯವಾಗಿದ್ದ ಮಗಳು ಪ್ರಿಯಕರನೊಂದಿಗೆ ಪರಾರಿಯಾಗಿದ್ದು, ಇದರಿಂದ ನೊಂದ ಯುವತಿಯ ಪೋಷಕರು ಆತ್ಮಹತ್ಯೆಗೆ ಶರಣಾದ ಘಟನೆ ಗೌರಿಬಿದನೂರು ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚೌಡಮ್ಮ (37) ಹಾಗೂ ಚೌಡಪ್ಪ (43) ಮೃತ ದಂಪತಿ. ದಂಪತಿಯ ಕಿರಿಯ ಪುತ್ರಿ ಮಧುಶ್ರೀಗೆ ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆಗೆ ಮುನ್ನವೇ ಆಕೆ ತನ್ನ ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ. ಕಳೆದ 3 ವರ್ಷಗಳ ಹಿಂದೆಯೂ ಸಹ ಮೊದಲ ಮಗಳು ಅನುಶ್ರೀ ಸಹ ಪ್ರೀತಿಸಿದ ಯುವಕನ ಜೊತೆ ಪರಾರಿಯಾಗಿ ಮದುವೆಯಾಗಿದ್ದಳು.
ಮಕ್ಕಳ ನಿರ್ಧಾರದಿಂದ ಅವಮಾನ ಆಗಿದೆ ಎಂದು ಮನನೊಂದಿದ್ದ ದಂಪತಿ ಗ್ರಾಮದ ಹೊರವಲಯದ ಜಮೀನಲ್ಲಿನ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಂದು ಬೆಳಗ್ಗೆ ಗ್ರಾಮಸ್ಥರು ಮೃತದೇಹ ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದು, ಘಟನೆ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ