ಬೀದರ್ :
ರಾಜ್ಯದಲ್ಲೆ ಮೊದಲ ಬಾರಿಗೆ ಅತಿ ಹೆಚ್ಚು ಗಾಂಜಾ ವಶಪಡಿಸಿಕೊಂಡಿರುವ ಘಟನೆ ಬೀದರ್ ನಲ್ಲಿ ನಡೆದಿದೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಜಂಬಗಿ ಶಿವಾರ ಗ್ರಾಮದ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ 6.50 ಕ್ವಿಂಟಾಲ್ ಗಾಂಜಾವನ್ನು ಬೀದರ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಇದರ ಮೌಲ್ಯ 35 ಲಕ್ಷ ರೂ.ಗೂ ಹೆಚ್ಚು ಎನ್ನಲಾಗಿದೆ.
ಗಡಿ ಭಾಗದ ಹೊಲಗಳಲ್ಲಿ ಬೆಳೆಸಿದ್ದ ಗಾಂಜಾ ತಂದು ಪ್ಯಾಕ್ ಮಾಡಿ ಹೊರ ರಾಜ್ಯಕ್ಕೆ ಕಳುಹಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದುಕೊಂಡ ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ, ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಒಂದು ಕಾರು, ಮೂರು ಬೈಕ್ ವಶ ನಾಪತ್ತೆಯಾಗಿರುವ ಜಮೀನು ಮಾಲೀಕ ಗೋಪಾಲ್, ಹಾಗೂ ವಿಜಯ್ ಗಾಗಿ ಪೊಲೀಸರ ಶೋಧ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ