ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

ಪಾವಗಡ:

    ತಾಲ್ಲೂಕಿನಲ್ಲಿ ಕನ್ನಡದ ಹೆಜ್ಜೆಯನ್ನು ದೃಡವಾಗಿ ಇಡಲು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ ಅಪಾರವಾಗಿದೆ ಎಂದು ಜನಪದ ಸಾಹಿತಿ ನಿವೃತ್ತ ಪ್ರಾಂಶುಪಾಲ ಸಣ್ಣನಾಗಪ್ಪ ಅಭಿಪ್ರಾಯ ಪಟ್ಟಿದ್ದಾರೆ.

     ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ಧಿನಾಚರಣೆ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶಾರದಾವಿದ್ಯಾಪೀಠ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಪರಿಷತ್ತಿನ ವೇಧಿಕೆ ಅನೇಕ ಎಲೆ ಮರೆಯ ಕಾಯಂತೆ ಇರುವ ಸಾಹಿತಿಗಳನ್ನು ಲೇಖಕರನ್ನು ಪ್ರತಿಭೆಗಳನ್ನ ಹೊರತೆಗೆದು ಕನ್ನಡ ಸಾರಸ್ವತ ಲೋಕಕ್ಕೆ ಪರಿಚರಯಿಸಿತೆಂದು ತಿಳಿಸಿದರು ದಟ್ಟ ತೆಲಗು ಪ್ರಭಾವ ಇರುವ ನಾಡಿನಲ್ಲಿ ಕನ್ನಡವನ್ನು ಬಿತ್ತಿಬೆಳೆಯುವ ಕೆಲಸ ಕಳೆದ 28ವರ್ಷಗಳಿಂದ ಮಾಡಿಕೊಂಡು ಬಂದಿದ್ದು 1993ರಿಂದ ಶಾಲೆಗೊಂದು ಕಾರ್ಯಕ್ರಮ ನಡೆಸಿಕೊಂಡು1000ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳನ್ನು ನೀಡಿದೆ ಎಂದರು.

       ಇದುವರೆಗೂ 13ಜನ ಅಧ್ಯಕ್ಷರು 7ದತ್ತಿನಿಧಿ 8ತಾಲ್ಲೂಕು ಸಮ್ಮೇಳನ ಒಂದು ಜಿಲ್ಲಾ ಸಮ್ಮೇಳನ ಅಲ್ಲದೆ ನೂರಾರು ಸಾಹಿತಿಗಳನ್ನು ತಾಲ್ಲೂಕಿನ ಜನತೆಗೆ ಪರಿಚಯಿಸಿದೆ ಎಂದರು

        ಅನೇಕ ಗಣ್ಯರನ್ನು ಸಾಹಿತಿಗಳನ್ನು ಇಲ್ಲಿನ ಇತಿಹಾಸ ಸಾಹಿತ್ಯ ಲೇಖಕರನ್ನು ಪರಿಚಯಿಸಿದ ಹೆಮ್ಮೆ ಪರಿಷತ್ತಿಗೆ ಇದೆ ಎಂದರು.
ಕ ಸಾ ಪ ಅಧ್ಯಕ್ಷ ಅರ್ .ಟಿ ಖಾನ್ ಪರಿಷತ್ತು ತಾಲ್ಲೂಕಿನ ಭಾಷಾಅಭಿವೃದ್ಧಿಗೆ ಕಳೆದ 28ವರ್ಷಗಳಿಂದ ನಾಡು ನುಡಿಗೆ ಬಹುದೊಡ್ಡ ಕೊಡುಗೆ ನೀಡಿದೆ ತೆಲಗನ್ನಡ ನಾಡಿನಲ್ಲಿ ಭಾಷೆಯನ್ನು ಭವ್ಯವಾಗಿ ಬೆಳೆಸುತ್ತಿದೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಪ್ರತಿಭೆಗಳು ತಾಲ್ಲೂಕಲ್ಲಿ ಹೆಚ್ಚಬೇಕು ಎಂದರು.ಕವಿಗೋಷ್ಠಿ ನಡೆಯಿತು ಅನೇಕ ಕವಿಗಳು ಕಾವ್ಯವಾಚನ ಮಾಡಿದರು ಈ ಸಂದರ್ಭದಲ್ಲಿ ಹಿರಿಯ ಅಜೀವ ಸದಸ್ಯ ಶ್ರೀಧರ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಾರದಾ ವಿದ್ಯಾಪೀಠದ ಅಧ್ಯಕ್ಷ ಕೆ ಬಿ ರಾಮಮೋಹನ್ ಸೂರ್ಯನಾರಾಯಣ ಎಲ್ ಶಿವಶಂಕರನಾಯ್ಡು. ಅಂತರಗಂಗೆ ಶಂಕರಪ್ಪ ಒಮಾನಾಗರಾಜು ಎಂಜೆ ಕೃಷ್ಣಮೂರ್ತಿ ಐ ಎ ನಾರಾಯಣಪ್ಪ ಮುಖ್ಯಶಿಕ್ಷಕ ಹನುಮಂತರಾಯಪ್ಪ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link