ಸ್ಥಳಿಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈತ್ರಿ ಆಸಾದ್ಯ : ಬೆಮೆಲ್ ಕಾಂತರಾಜು

ಪಾವಗಡ :

     ರಾಜ್ಯದಲ್ಲಿ ಮೈತ್ರಿ ಸರ್ಕಾರ ಆದಿಕಾರದಲ್ಲಿದ್ದರೂ ಸ್ಥಳಿಯ ಸಂಸ್ಥೆಗಳ ಚುನಾವಣೆಗಳಲ್ಲಿ ಆಸಾದ್ಯ ಎಂದು ವಿಧಾನ ಪರಿಷತ್ ಸದಸ್ಯರಾದ ಬೆಮಲ್ ಕಾಂತರಾಜು ತಿಳಿಸಿದರು.

     ಪಟ್ಟಣದ ಎಸ್‍ಎಸ್‍ಕೆ ಬಯಲು ರಂಗಮಂದಿರದಲ್ಲಿ ಬಾನುವಾರ ಏರ್ಪಟ್ಟಿದ್ದ ಪುರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಸಂಮಿಶ್ರ ಸರ್ಕಾರದಂತೆ ಸ್ಥಳಿಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈತ್ರಿ ಆಸಾಧ್ಯವಾದದ್ದು ಎಂದು ತಿಳಿಸಿದ ಅವರು ,ತಾಲ್ಲೂಕಿನಲ್ಲಿ ಬೀಕರ ಬರದ ಚಾಯೇ ಆವರಿಸಿದ್ದು ನೀರಿನ ಆಹಾಕಾರವುಂಟಾಗಿದೆ ಎಂದರು.

     ಪುರಸಭಾ ಚುನಾವಣೆಯಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಪಕ್ಷ ನೀಡಿದ ಜವ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿ 23 ಸದಸ್ಯರ ಗೆಲುವಿಗೆ ಶ್ರಮಿಸಬೇಕೆಂದರು.

      ಕಾರ್ಯಕ್ರಮದ ಅದ್ಯಕ್ಷತೆವಹಿಸಿ ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ ಪಟ್ಟಣದಲ್ಲಿನ ಕುಡಿಯುವ ನೀರಿಗಾಗಿ 3.50 ಕೋಟಿ ನನ್ನ ಆವದಿಯಲ್ಲಿ ನೀಡಿದ್ದು ಹಾಗೂ ಶ್ರೀರಾಮಕೃಷ್ಣ ಸೇವಾಶ್ರಮದವತಿಯಿಂದ ಪಟ್ಟಣದ ಹಲವು ಕಡೆ ಶುದ್ದಕುಡಿಯುವ ನೀರಿನ ಘಟಕಗಳನ್ನು ನಿರ್ಮಣ ಮಾಡಿ ಪ್ಲೋರೈಡ್ ಮುಕ್ತ ನೀರು ನೀಡಲಾಗಿದೆ ಎಂದರು.

      ಇದೇ ತಿಂಗಳು ನಡೆಯುವ ಪುರಸಭಾ ಚುನಾವಣೆಯಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಸಕ್ರೀಯವಾಗಿ ತೋಡಗಿಸಿಕೊಂಡು ಎಲ್ಲಾ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದರು.

       ಜಿಲ್ಲಾ ಕಾರ್ಯದ್ಯಕ್ಷರಾದ ಆರ್.ಸಿ.ಅಂಜಿನಪ್ಪ ಮಾತನಾಡಿ 23 ವಾರ್ಡ್‍ಗಳಿಂದ ಪ್ರತಿ ವಾರ್ಡ್‍ಗೆ ಐದಾರು ಜನ ಆಕಾಂಕ್ಷಿಗಳಿದ್ದು ಟಿಕೇಟ್ ಕೈತಪ್ಪಿದವರಿಗೆ ಪಕ್ಷದಲ್ಲಿ ಸೂಕ್ತಸ್ಥಾನಮಾನ ನೀಡಲಿದ್ದು ಪಕ್ಷದ ಆಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದರು.ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅದ್ಯಕ್ಷರಾದ ಬಲರಾಮರೆಡ್ಡಿ ,ಪುರಸಭಾ ಮಾಜಿ ಅದ್ಯಕ್ಷರಾದ ಮಾನಂ ವೆಂಕಟಸ್ವಾಮಿ ,ಮಹಿಳಾ ಅದ್ಯಕ್ಷರಾದ ಅಂಭಿಕಾ ,ಮುಖಂಡರಾದ ತಿಮ್ಮರೆಡ್ಡಿ ,ಎಸ್.ಕೆ.ರೆಡ್ಡಿ ,ಗೋವಿಂದಬಾಬು ,ನಾರಾಯಣಪ್ಪ ,ರಾಮಕೃಷ್ಣಪ್ಪ , ಈಶ್ವರಪ್ಪ , ಜಿ.ಎ.ವೆಂಕಟೇಶ್ , ಮನುಮಹೇಶ್ , ಅಚಿಜನ್ ತಿಮ್ಮರಾಜು ,ಮಣಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap