ಬೆಂಗಳೂರು
ಪಾರ್ಟಿ ಮಾಡುತ್ತಿದ್ದ ವೇಳೆ ಮದ್ಯದ ಅಮಲಿನಲ್ಲಿ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಸ್ನೇಹಿತರೇ ರೌಡಿ ಪುಟ್ಟರಾಜ್ ಅಲಿಯಾಸ್ ಮುತ್ತುರಾಜ್‍ನನ್ನು ಕಲ್ಲಿನಿಂದ ಜಜ್ಜಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆಗೈದಿರುವ ದುರ್ಘಟನೆ ನಗರದ ಹೊರವಲಯದ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಳಿ ನಡೆದಿದೆ.
ತ್ಯಾಮಗೊಂಡ್ಲು ಹೋಬಳಿಯ ಹಸಿರುಹಳ್ಳಿಯ ಪುಟ್ಟರಾಜ್(36)ನನ್ನು ಭಾನುವಾರ ರಾತ್ರಿ 9ರ ವೇಳೆ ಗ್ರಾಮದ ಹೊರವಲಯದ ಜಮೀನಿಗೆ ಕರೆದೊಯ್ದ ಮೂವರು ಸ್ನೇಹಿತರು ಪಾರ್ಟಿ ಮಾಡಿ ಮದ್ಯದ ಅಮಲಿನಲ್ಲಿ ಕ್ಲುಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ.
ಜಗಳ ವಿಕೋಪಕ್ಕೆ ತಿರುಗಿದಾಗ ಪುಟ್ಟರಾಜ್‍ನನ್ನು ಕಲ್ಲಿನಿಂದ ಜಜ್ಜಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ ಕೊಲೆಯ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ತ್ಯಾಮಗೊಂಡ್ಲು ಪೊಲೀಸರು ಕೃತ್ಯ ವೆಸಗಿದ ರಾಜೇಶ್‍ನನ್ನು ಬಂಧಿಸಿ ಉಳಿದಿಬ್ಬರ ಬಂಧನಕ್ಕೆ ತೀವ್ರ ಶೋಧ ನಡೆಸಿದ್ದಾರೆ.
ಬೆದರಿಕೆ ಸುಲಿಗೆ ಕೊಲೆಯತ್ನ ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಪುಟ್ಟರಾಜ್‍ನನ್ನು ತ್ಯಾಮಗೊಂಡ್ಲು ಪೊಲೀಸ್ ಠಾಣೆಯ ರೌಡಿ ಪಟ್ಟಿಗೆ ಸೇರಿಸಲಾಗಿತ್ತು ಕೆಲ ದಿನಗಳಿಂದ ಅಪರಾದ ಕೃತ್ಯಗಳಿಂದ ದೂರವಿದ್ದ ಆತ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು,ಮುತ್ತುರಾಜ್ ಮೇಲೆ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೂರು ಪ್ರಕರಣಗಳು ವಿಚಾರಣೆಯಲ್ಲಿದ್ದವು ಎಂದು ಗ್ರಾಮಾಂತರ ಎಸ್‍ಪಿ ಡಾ.ರಾಮ್‍ನಿವಾಸ್ ಸೆಪಟ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ