ಮನುಷ್ಯ ಸಾಧನೆಯ ಕಿಚ್ಚು ಬೆಳೆಸಿಕೊಳ್ಳಬೇಕು;ಶಿಮೂಶ

ಚಿತ್ರದುರ್ಗ :

   ಬದುಕಲಿ ದುಶ್ಚಟಗಳ ಹುಚ್ಚು ಹಿಡಿಸಿಕೊಳ್ಳದೆ ಏನನ್ನಾದರೂ ಸಾಧಿಸಬೇಕೆಂಬ ಕಿಚ್ಚು ಬೆಳೆಸಿಕೊಳ್ಳಬೇಕು. ಈ ಬರದ ಭೂಮಿಯಲ್ಲಿ ಎರಡು ಐಎಎಸ್ ರ್ಯಾಂಕ್‍ಗಳು ಬಂದಿರುವುದು ನಿಜವಾಗಿಯೂ ಇದು ಈಗ ಭರವಸೆಯ ಭೂಮಿಯಾಗುತ್ತಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹರ್ಷ ವ್ಯಕ್ತಪಡಿಸಿದರು.

    ಬಸವಕೇಂದ್ರ ಶ್ರೀಮುರುಘಾಮಠ ಮತ್ತು ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯ ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಶರಣ ಸಂಗಮ, ಶ್ರೀ ಜಯವಿಭವ ಜಗದ್ಗುರುಗಳ ಸ್ಮರಣೆ ಮತ್ತು ಟಿ.ಪಿ. ಉಮೇಶ್ ಅವರ ವಚನಾಂಜಲಿ ಕೃತಿ ಬಿಡುಗಡೆ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯ ಐಎಎಸ್ ರ್ಯಾಂಕ್ ವಿಜೇತರಿಗೆ ಸನ್ಮಾನ ಮಾಡಿದ ಶರಣರು ಈ ರೀತಿ ಅಭಿಪ್ರಾಯಪಟ್ಟರು.

    ಪುಸ್ತಕ ಬರೆಯಬೇಕು ಎನ್ನುವವರು ಮೊದಲು ತಮ್ಮ ಮಸ್ತಕದ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕು. ಆ ಜಾಗೃತವಾದ ನಿಮ್ಮ ಮೆದುಳು ಸಾಧನೆಗೆ ಸ್ಫೂರ್ತಿ ನೀಡುವುದು. ಏನಾದರೂ ಒಂದು ಅತ್ಯುತ್ತಮವಾದುದನ್ನು ಸಾಧಿಸಲೇಬೇಕು ಎಂಬ ತುಡಿತ ಸದಾ ನಿಮ್ಮಲ್ಲಿರಬೇಕು ಎಂದ ಶರಣರು ಈ ಮಾತಿಗೆ ಸಮಾರಂಭದಲ್ಲಿ ಬಿಡುಗಡೆಯಾದ ವಚನಾಂಜಲಿ ಪುಸ್ತಕದ ಲೇಖಕರನ್ನು ಉದಾಹರಿಸಿದರು. ಮುಂದುವರೆದು, ಸಾಹಿತ್ಯ ಕೃಷಿಗೆ ತೊಡಗಿಸಿಕೊಳ್ಳುವುದು ಯುವಕರಿಗೆ ಒಳ್ಳೆಯ ಹವ್ಯಾಸ ಎಂದು ಶರಣರು ಹೇಳಿದರು.
ನಂತರ ಶ್ರೀ ಮುರುಘಾಮಠದ 17ನೇ ಪೀಠಾಧ್ಯಕ್ಷರಾಗಿದ್ದ ಶ್ರೀ ಜಯವಿಭವ ಜಗದ್ಗುರುಗಳನ್ನು ಸ್ಮರಿಸುತ್ತ, ಅವರು ತುಂಬಾ ಸರಳರು,

    ಸಾತ್ವಿಕರು, ಕೃಷಿಪ್ರಿಯರು, ಪ್ರಾಣಿಪ್ರಿಯರು ಅಷ್ಟೇ ಅಲ್ಲ ಅಪಾರ ದೇಶಭಕ್ತರೂ ಆಗಿದ್ದರು ಎಂದರು.1962ರಲ್ಲಿ ಭಾರತ ಮತ್ತು ಚೀನಾ ನಡುವೆ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ರೇಡಿಯೋದಲ್ಲಿ ಸೈನ್ಯವನ್ನು ಮತ್ತಷ್ಟು ಶಕ್ತಗೊಳಿಸಲು ದೇಶದ ಪ್ರಜೆಗಳು ಕೈಜೋಡಿಸಿ ಎಂದು ಆಗಿನ ಪ್ರಧಾನಿಗಳು ಮಾಡಿದ ಮನವಿಗೆ ಶ್ರೀ ಜಯವಿಭವ ಜಗದ್ಗುರುಗಳು ಶ್ರೀಮಠದ ಚಿನ್ನದ ಕಿರೀಟವನ್ನು, ಆಭರಣಗಳನ್ನು ಉದಾರವಾಗಿ ಕೇಂದ್ರಸರ್ಕಾರಕ್ಕೆ ನೀಡಿ ತಮ್ಮ ಅಪಾರ ದೇಶಪ್ರೇಮ ಮೆರೆದಿದ್ದಾರೆ. ದೇಶಕ್ಕೆ ಮತ್ತು ಸರ್ಕಾರಕ್ಕೆ ಆಗಿರುವ ಹಾನಿಯನ್ನು ನಾವೆಲ್ಲ ಹೊತ್ತುಕೊಳ್ಳಬೇಕು. ಕಾರಣ ದೇಶ ಉಳಿದರೆ ನಾವು ಉಳಿದಂತೆ ಎಂದು ಅವರು ತಿಳಿದಿದ್ದರು ಎಂದರು.

    ಮಾನವರು ಪರೋಪಕಾರ ಗುಣವನ್ನು ಬೆಳೆಸಿಕೊಳ್ಳಬೇಕು. ಪರೋಪಕಾರದಿಂದಾಗಿ ನಮ್ಮ ಬದುಕು ಪ್ರಖರವಾಗುತ್ತದೆ, ಪ್ರಕಾಶವಾಗುತ್ತದೆ. ಶರಣರು ಪ್ರತಿಪಾದಿಸಿದ ದಾಸೋಹ ಭಾವನೆಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದ ಶರಣರು, ಶ್ರೀ ಮುರುಘಾಮಠ ಇಂದು ಮಧ್ಯ ಕರ್ನಾಟಕದ ದಾಸೋಹ ಕೇಂದ್ರವಾಗಿ ತಲೆ ಎತ್ತಿದೆ. ಪ್ರತಿ ನಿತ್ಯವೂ ಸಾವಿರಾರು ಭಕ್ತರು ದಾಸೋಹದಲ್ಲಿ ಪ್ರಸಾದ ಸ್ವೀಕರಿಸುತ್ತಿದ್ದಾರೆ ಎಂದು ಶರಣರು ಹೇಳಿದರು.

     ವಚನಾಂಜಲಿ ಕೃತಿ ಲೇಖಕ ಟಿ.ಪಿ.ಉಮೇಶ್ ಮಾತನಾಡಿ, 1999ರಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ, ನನಗೆ ಹಾಸ್ಟೆಲ್ ದೊರೆಯದ ಸಂದರ್ಭದಲ್ಲಿ ನಾನು ಆಗ ಪ್ರತಿ ನಿತ್ಯ ಶ್ರೀಮಠದ ದಾಸೋಹದಲ್ಲೆ ಹಲವು ದಿನಗಳ ಕಾಲ ಪ್ರಸಾದ ಮಾಡಿದ್ದೆ. ಅದೇ ಇಂದು ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡುವಲ್ಲಿ ಬದುಕನ್ನು ಕಟ್ಟಿಕೊಳ್ಳುವಲ್ಲಿ ಕಾರಣವಾಗಿದೆ ಎಂದು ಹೇಳಿದರು. ಮುರುಘಾ ಶರಣರು ಪ್ರಭಾವಿ ಬರಹಗಾರರಾಗಿದ್ದು ನನ್ನ ಕೃತಿ ರಚನೆಯಲ್ಲಿ ಅವರ ಪ್ರಭಾವವೂ ಇದೆ ಎಂದರು.

    ಸನ್ಮಾನ ಸ್ವೀಕರಿಸಿದ ಎನ್. ರಾಘವೇಂದ್ರ, ಈ ದಿನದ ಈ ಸನ್ಮಾನ ನನಗೆ ಬಹಳ ಖುಷಿ ತಂದಿದೆ. ನಾನು ಸಾಧನೆ ಮಾಡಬೇಕಾದ ಕೆಲಸಗಳು ಇನ್ನು ಬಹಳಷ್ಟಿವೆ. ನಾವು ಏನಾದರೂ ಸಾಧನೆ ಮಾಡಬೇಕು ಎಂದು ನಿರ್ಧರಿಸಿದ ಕೂಡಲೇ ಆ ಹಾದಿಯಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.

     ನಂತರ ಡಾ. ಶ್ರೀಕಾಂತ್ ಮಾತನಾಡಿ, ನಾನು ಐಎಎಸ್ ರ್ಯಾಂಕ್ ಬಂದಿರುವುದು ಮುಖ್ಯವಲ್ಲ. ಇನ್ನುಮುಂದೆ ನನ್ನ ಕೆಲಸದಲ್ಲಿ ಮತ್ತು ಈ ದೇಶಕ್ಕೆ ನೀಡುವ ಸೇವೆಯೇ ನನಗೆ ಮುಖ್ಯ ಸಾಧನೆ ಎಂದು ನುಡಿದರು.ಈ ಸಂದರ್ಭದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಪ್ರಭಾರ ಪ್ರಾಚಾರ್ಯರಾದ ನಾಗಭೂಷಣ್, ರಾಜಣ್ಣ, ಜಗದೀಶ್ ಹಾಗು ಇತರೆ ಸಿಬ್ಬಂದಿಯವರಿದ್ದರು. ಅಕ್ಕ ವಚನ ಗಾಯನ ಬಳಗದ ಮಹಿಳಾ ಸದಸ್ಯರು ಪ್ರಾರ್ಥಿಸಿದರು. ಕು| ಪೂಜಾ ಸ್ವಾಗತಿಸಿ, ಎಂ.ಸಿ. ಅಕ್ಷತಾ ವಂದಿಸಿದರು. ಸುರಕ್ಷಾ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap