ಹೊಸದುರ್ಗ:

ಸೌಹಾರ್ದತೆ, ಸಹೋದರಂತೆ ಬದುಕ ಬೇಕಾಗಿರುವುದುಅಗತ್ಯ, ದೇವಾಸ್ಥಾನಗಳು ಇರುವುದು ಪೂಜೆ ಪುನಸ್ಕಾರ ಪಾಪ ಕರ್ಮಗಳನ್ನು ತಿದ್ದಿಕೊಳ್ಳಲು ವಿನಃ ಪ್ರತಿಷ್ಠೆಗಲ್ಲಎಂದುಕುಂಚಿಟಿಗ ಮಠದಡಾ.ಶಾಂತವೀರ ಸ್ವಾಮೀಜಿತಿಳಿಸಿದರು.ಹೊಳಲ್ಕೆರೆ ತಾಲ್ಲೂಕಿನ ಪಾಪನೇಹಳ್ಳಿ ಗ್ರಾಮದಲ್ಲಿ ನಡೆದಶ್ರೀ ಆಂಜನೇಯ ಸ್ವಾಮಿ ಕಳಸಾರೋಹಣ ಹಾಗೂ ಕುಂಭಾಭಿಷೇಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ನಂತರ ಮಾತನಾಡಿದ ಅವರು ದೇವರು ಧರ್ಮದ ಹೆಸರು ಕೂಡಬೇಕು, ಮನಸ್ಸು ಮನಸ್ಸುಗಳ ಮಧ್ಯೆ,ಜಾತಿ ಜಾತಿಗಳ ಮಧ್ಯೆ, ಭಿನ್ನಾಭಿಪ್ರಾಯ ತರುವವರ ಬಗ್ಗೆ ಎಚ್ಚರಿಕೆ ವಹಿಸಬೇಕು . ದೇವರು ಮತ್ತು ಧರ್ಮದ ಕೆಲಸ ಕಟ್ಟುವುದು ಸೇರಿಸುವುದು ಬೇರ್ಪಡಿಸುವುದಲ್ಲ ಆದರೆ ಕೆಲವರು ಇದನ್ನೆ ವೃತ್ತಿ ಮಾಡಿಕೊಂಡು ಧರ್ಮ ಧರ್ಮಗಳ ಜಾತಿ ಜಾತಿಗಳ ವ್ಯಕ್ತಿ ವ್ಯಕ್ತಿಗಳ ಮಧ್ಯೆ ಕಂದಕವನ್ನು ಉಂಟು ಮಾಡುತ್ತಿರುವುದು ತುಂಬಾ ಅಪಾಯಕಾರಿ. ಆದರ್ಶ ಹೇಳಬೇಕಾದ ಕೆಲವರು ಅಪಾಯಕಾರಿಯಾಗಿ ಜನಾಂಗಗಳ ಜನಗಳ ಮಧ್ಯೆ ಇರುವ ಸಣ್ಣ ಸಣ್ಣ ವಿಷಯಗಳನ್ನು ದೊಡ್ಡದು ಮಾಡಿತಮ್ಮ ಬೇಳೆ ಬೇಯಿಸಿಕೊಳ್ಳುವ ಅಪಾಯಕಾರಿ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಇದೇ ವೇಳೆ ಪಿಎಲ್ಡಿ ಬ್ಯಾಂಕ್ಅಧ್ಯಕ್ಷ ಮಂಜುನಾಥ್, ಗ್ರಾಮದ ಮುಖಂಡರಾದರಾಜಪ್ಪ, ಹಾಲಸಿದ್ದಪ್ಪ, ವಸಂತ್ಕುಮಾರ್, ರಮೇಶ್ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
