ಚಿಕ್ಕನಾಯಕನಹಳ್ಳಿ
ಕಂದಿಕೆರೆ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಅಸ್ಪಶ್ಯರಿಗೆ ಬಹಿಷ್ಕಾರ ಹಾಕಲಾಗಿದೆ ಎಂಬ ದೂರಿನ ಹಿನ್ನೇಲೆಯಲ್ಲಿ ಅಧಿಕಾರಿಗಳು ಹೋಗಿ ಈ ಭಾಗದಲ್ಲಿ ಅರಿವು ಮೂಡಿಸಿದ್ದಾರೆ ಆದರೂ ಇಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸಲು ಶಾಸಕರು, ಅಧಿಕಾರಿಗಳು ಶಾಂತಿ ಸಭೆಯನ್ನು ನಡೆಸಬೇಕು ಎಂದು ಡಿ.ಎಸ್.ಎಸ್ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ಆಗ್ರಹಿಸಿದರು.
ಕಂದಿಕೆರೆ ರೇಣುಕಾಯಲ್ಲಮ್ಮದೇವಿ ಜಾತ್ರಾಯ ಅಗ್ನಿಕೊಂಡೋತ್ಸವ ದಿನದಂದು ಅಸ್ಪಶ್ಯರಿಗೆ ಜಾತ್ರೆ ಸಮಯದಲ್ಲಿ ಊರಿನ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದರು ಎಂದು ಈ ಭಾಗದ ಜನರು ಅಧಿಕಾರಿಗಳಿಗೆ ದೂರು ನೀಡಿದ್ದರು. ಅದರಂತೆ ಸಮಾಜಕಲ್ಯಾಣಾಧಿಕಾರಿ ರೇಣುಕಾದೇವಿ ಹಾಗೂ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರಲ್ಲಿ ಅಸ್ಪಶ್ಯತೆ ಬಗ್ಗೆ ಅರಿವು ಮೂಡಿಸಿ ಜಾತ್ರೆ ಸುಗಮವಾಗಿ ನಡೆಯುವಂತೆ ಮಾಡಿದ್ದರು. ಅವರ ಕಾರ್ಯ ಶ್ಲಾಘನೀಯವಾಗಿದ್ದು, ಅದರಂತೆ ಜಾತ್ರೆ ಮುಗಿದಿದೆ. ಈಗ ಈ ಭಾಗದಲ್ಲಿ ಒಮ್ಮೆ ಶಾಂತಿ ಸಭೆ ನಡೆಸಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಬೇಕು ಎಂದರು.ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಗೋ.ನಿ.ವಸಂತಕುಮಾರ್, ಗೋವಿಂದರಾಜು ಮತ್ತಿತರರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/05/06.05.19-C.N.H-p1.gif)