ಮೋದಿ ಸರ್ಕಾರಕ್ಕೆ ಗುಡ್ ಬೈ ಹೇಳುವ ಕಾಲ ಬಂದಿದೆ; ಸುರ್ಜೇವಾಲ

ಕೈತ್ವಾಲ್

       ದೇಶದ ಸಂವಿಧಾನವನ್ನು ರಕ್ಷಿಸಿಕೊಳ್ಳಬೇಕಾದರೆ, ಜನರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಆಡಳಿತಕ್ಕೆ ಗುಡ್ ಬೈ ಹೇಳುವುದು ಅನಿವಾರ್ಯ ಎಂದು ಕಾಂಗ್ರೆಸ್ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಹಾಗೂ ಶಾಸಕ ರಣದೀಪ್‌ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

       ಕಾಂಗ್ರೆಸ್‌ ಪಕ್ಷ ಆಯೋಜಿಸಿದ್ದ ದಲಿತ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮೋದಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಸಂವಿಧಾನಕ್ಕೆ ಅಪಾಯ ಎದುರಾಗಿದ್ದು, ಅದನ್ನು ಉಳಿಸಲು ಸರ್ಕಾರ ಬದಲಿಸಬೇಕಿದೆ. ಮೋದಿ ಸರ್ಕಾರಕ್ಕೆ ಗುಡ್ ಬೈ ಹೇಳುವ ಸಮಯ ಬಂದಿದೆ ಎಂದರು.

       ಬಡವರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ‘ನ್ಯಾಯ್’ ಎಂಬ ಹೊಸ ಯೋಜನೆ ಘೋಷಿಸಿದ್ದು, ಇದರಲ್ಲಿ ಬಡ ಕುಟುಂಬಗಳು ವಾರ್ಷಿಕ 72 ಸಾವಿರ ರೂ. ಕನಿಷ್ಠ ಆದಾಯ ಗಳಿಸುತ್ತವೆ. ಇದು ಸಮಾಜದ ಕಡುಬಡ ಕುಟುಂಬಗಳಿಗೆ ಅನುಕೂಲಕರವಾಗಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರಿಗೆ ಸಂಸತ್ತಿನಲ್ಲಿ ಶೇ.33ರಷ್ಟು ಮೀಸಲಾತಿ, ರೈತರ ಸಾಲ ಮನ್ನಾ, ಪ್ರತಿ ವರ್ಷ ಕಿಸಾನ್ ಬಜೆಟ್ ಮಂಡನೆ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳ ಬಜೆಟ್ ದುಪ್ಪಟ್ಟು, ಮನ್ರೇಗ ಯೋಜನೆಯಡಿ ವರ್ಷಕ್ಕೆ ಕನಿಷ್ಠ 150 ದಿನಗಳ ಕನಿಷ್ಠ ಉದ್ಯೋಗ ಖಾತರಿ ಮತ್ತಿತರರ ಯೋಜನೆಗಳನ್ನು ಜಾರಿಗೆ ತರಲಿದೆ ಎಂದರು.

        ದೇಶದಲ್ಲಿ ಶೇ.16ರಷ್ಟು ದಲಿತ ಜನಸಂಖ್ಯೆಯಿದ್ದು, ಅವರ ಕಲ್ಯಾಣ ಯೋಜನೆಗಳನ್ನು ಎನ್ ಡಿಎ ಸರ್ಕಾರ 294ರಿಂದ 256ಕ್ಕಿಳಿಸಿದೆ. 2018-19ನೇ ಸಾಲಿನ ಆಯವ್ಯಯದಲ್ಲಿ ಶೇ.5.58ರಷ್ಟು ಅನುದಾನ ಮೀಸಲಿರಿಸಿದೆ. ಎನ್‌ ಡಿಎ ಸರ್ಕಾರದಲ್ಲಿ ದಲಿತರ ಮೀಸಲಾತಿಗಳನ್ನು ಹಿಂಪಡೆಯುವ ಆತಂಕವಿದೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link