ಗುಬ್ಬಿ
ವೀರಶೈವ ಲಿಂಗಾಯಿತ ಸಮಾಜ ಸೇರಿದಂತೆ ಸಮಾಜದ ವಿವಿಧ ಸಂಘಗಳ ಸಹಯೋಗದಲ್ಲಿ ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಶ್ರೀಬಸವೇಶ್ವರರ ಜಯಂತಿ ಮಹೋತ್ಸವವನ್ನು ಅತ್ಯಂತ ವೈಭವಯುತವಾಗಿ ನಡೆಸಲಾಯಿತು. ಪಟ್ಟಣದ ಶ್ರೀಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀಬಸವೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು.
ಮೆರವಣಿಗೆಯಲ್ಲಿ ನಂದೀಧ್ವಜಗಳ ಕುಣಿತ, ವೀರಗಾಸೆ ಕುಣಿತ ಸೇರಿದಂತೆ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಾಗವಹಿಸಿದ್ದ ಭಕ್ತಾಧಿಗಳಿಗೆ ಪಾಲಕ ಫಲಹಾರ ಮತ್ತು ಮಜ್ಜಿಗೆಯನ್ನು ವಿತರಿಸಲಾಯಿತು. ಭಕ್ತಾಧಿಗಳಿಗೆ ಪಟ್ಟಣದ ಶಿವರಾತ್ರಿ ಕಲ್ಯಾಣ ಮಂದಿರದಲ್ಲಿ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು, ಮುಖಂಡರಾದ ಎಸ್.ಡಿ.ದಿಲೀಪ್‍ಕುಮಾರ್. ಜಿ.ಎಸ್.ಪ್ರಸನ್ನಕುಮಾರ್, ಜಿ.ಎನ್.ಬೆಟ್ಟಸ್ವಾಮಿ, ಪಟ್ಟಣ ಪಂಚಾಯ್ತಿ ಸದಸ್ಯರಾದ ವಿರೂಪಾಕ್ಷ, ಜಿ.ಸಿ.ಕೃಷ್ಣಮೂರ್ತಿ, ಜಿ.ಎನ್.ಅಣ್ಣಪ್ಪಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿ ಎಸ್.ಆರ್.ನಟರಾಜು, ವೀರಶೈವ ಲಿಂಗಾಯಿತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಿದ್ದಲಿಂಗಮೂರ್ತಿ, ಕಾರ್ಯದರ್ಶಿ ಬಸವಲಿಂಗಯ್ಯ, ಖಜಾಂಚಿ ಶಶಿಭೂಷಣ್, ಉಪಾಧ್ಯಕ್ಷ ದಿವ್ಯಪ್ರಕಾಶ್, ವೀರಶೈವ ನೌಕರರ ಸಂಘದ ಅಧ್ಯಕ್ಷ ಬಿ.ಎನ್.ದಯಾನಂದ್, ಕಾರ್ಯಧರ್ಶಿ ಕೆ.ಎಂ.ರವೀಶ್, ದಯಾನಂದಸರಸ್ವತಿ, ಶಿವಣ್ಣ, ಜಗದೀಶ್, ಕಲ್ಪನಾ, ಉಮೇಶ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಪದಾಧಿಕಾರಿಗಳಾದ ರಮೇಶ್, ಮಹಾಂತೇಶ್, ವಿಶ್ವನಾಥ್, ಯತೀಶ್, ಕುಮಾರ್, ಶಿವಕುಮಾರ್, ಎ.ಎಸ್.ರೇಣುಕಯ್ಯ. ಡಿ.ಆರ್.ಕೀರ್ತಿರಾಜ್, ಗಂಗಾಧರ್, ಹೇಮಂತ್, ವಿಶ್ವಾರಾಧ್ಯ, ದಯಾನಂದ್ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಿಂದ ವೀರಶೈವ ಲಿಂಗಾಯಿತ ಸಮಾಜದ ಮುಖಂಡರು ಭಾಗವಹಿಸಿದ್ದರು.