ಕೊರಟಗೆರೆ
ಪಟ್ಟಣದ ಎಲ್ಲಾ ವಾರ್ಡ್ಗಳಿಗೂ ಫ್ರೇಂಡ್ಸ್ಗ್ರೂಪ್ ವತಿಯಿಂದ ಟ್ಯಾಂಕರ್ಗಳ ಮೂಲಕ ಉಚಿತಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ಪಟ್ಟಣ ಪಂಚಾಯಿತಿ ವತಿಯಿಂದ ಕೊರಟಗೆರೆ ಪಟ್ಟಣದ ಎಲ್ಲಾ ವಾರ್ಡ್ಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಮಾಡದೆ ಕುಡಿಯುವ ನೀರಿನ ಹಾಹಾಕಾರ ಉಂಟಾದ ಹಿನ್ನೆಲೆಯಲ್ಲಿ ಸಾರ್ವಜನಿಕರ ಮನವಿ ಮೇರೆಗೆ ಪಟ್ಟಣದ ಫ್ರೇಂಡ್ಸ್ಗ್ರೂಪ್ ವತಿಯಿಂದ ಉಚಿತವಾಗಿ ಸಾರ್ವಜನಿಕರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಅವಶ್ಯಕತೆಯಿರುವ ಬೀದಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಫ್ರೇಂಡ್ಸ್ಗ್ರೂಪ್ ಅಧ್ಯಕ್ಷ ರವಿಕುಮಾರ್ ಪಟ್ಟಣದಲ್ಲಿ ಕುಡಿಯುವ ನೀರಿಗೆ ಸರ್ವಜನಿಕರು ಕಷ್ಟಪಡುತ್ತಿದ್ದು ನಮ್ಮ ಫ್ರೇಂಡ್ಸ್ಗ್ರೂಪ್ ಸೇವಾ ಸಂಸ್ಥೆಯಿಂದ ಬೇಡಿಕೆ ಇರುವ ವಾರ್ಡ್ಗಳಿಗೆ ಉಚಿತವಾಗಿ ಬೇಸಿಗೆ ಮುಗಿದು ಮಳೆ ಬಂದು ನೀರಿನ ಹಾಹಾಕಾರ ಮುಗಿಯುವವರೆಗೂ ಟ್ಯಾಂಕರ್ ಮೂಲಕ ನೀರ ಸರಬರಾಜು ಮಾಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
