ಕರಾಚಿ:
ಪಾಕಿಸ್ತಾನದ ಜಲ ಪ್ರದೇಶ ಪ್ರವೇಶಿಸಿದ 34 ಭಾರತೀಯ ಮೀನುಗಾರರನ್ನು ಅಲ್ಲಿನ ಸಾಗರ ಭದ್ರತಾ ಪಡೆ ಮಂಗಳವಾರ ರಾತ್ರಿ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಜಲಗಡಿ ದಾಟಿ ಒಳಬಂದಿದ್ದ 34 ಮೀನುಗಾರರು ಹಾಗೂ ಆರು ಬೋಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಮೀನುಗಾರರನ್ನು ಸ್ಥಳೀಯ ಬಂದರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಅವರನ್ನು ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಲಾಗುವುದು’ ಅಲ್ಲಿನ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೊಳಪಡೆಸಬೇಕಾ ಎಂಬ ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ಹಾಗೂ ಭಾರತ ಸಾಮಾನ್ಯವಾಗಿ ಮೀನುಗಾರರನ್ನು ಬಂಧಿಸುತ್ತಿರುತ್ತದೆ. ಅರಬ್ಬೀ ಸಮುದ್ರದಲ್ಲಿ ಉಭಯ ದೇಶಗಳ ನಡುವೆ ಯಾವುದೇ ಸ್ಪಷ್ಟ ಗಡಿ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
