ಬಸವಣ್ಣನವರ ಆದರ್ಶ ಪಾಲನೆ ಮಾಡಬೇಕು

ಚಿತ್ರದುರ್ಗ

      ಬಸವಣ್ಣ ಅವರ ತತ್ವ ಆದರ್ಶಗಳನ್ನು ಎಲ್ಲರು ಪಾಲಿಸಬೇಕು ಎಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಎಂ.ಚಿದಾನಂದಪ್ಪ ಹೇಳಿದರು.

     ನಗರದ ದಾವಣಗೆರೆ ರಸ್ತೆಯ ಈಶ್ವರ ಕಾಂಪ್ಲೆಕ್ಸ್‍ನಲ್ಲಿ ಮಂಗಳವಾರ ಅಖಿಲ ಬಾರತ ವೀರಶೈವ ಮಹಾಸಭಾದ ನೂತನ ತಾಲೂಕು ಘಟಕದ ಕಚೇರಿಯಲ್ಲಿ ಆಯೋಜಿಸಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಜನಾಂಗದ ಸಂಘಟನೆ ಮಾಡುವುದು ಮುಖ್ಯವಾಗಿದೆ. ಬಸವಣ್ಣ ಅವರು ತಮ್ಮ ವಚನಗಳಿಂದ ಸಮಾಜವನ್ನು ಕಟ್ಟುವ ಕೆಲಸ ಮಾಡಿದರು. ಅವರ ತತ್ವ ಆದರ್ಶಗಳು ಎಲ್ಲ ಕಾಲದಲ್ಲೂ ಸಲುತ್ತವೇ. ಅವರ ವಚನಗಳ ಸಾರವನ್ನು ಅರ್ಥ ಮಾಡಿಕೊಂಡು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಜನಾಂಗದ ಸಂಘಟನೆ ಇನ್ನೂ ಬಲಪಡಿಸಬೇಕಿದೆ. ಎಲ್ಲರು ಜನಾಂಗದ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

      ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ರುದ್ರೇಶ್ ಐಗಾಳ್ ಮಾತನಾಡಿ, ಬಸವ ಜಯಂತಿ ದಿನ ನಮ್ಮ ತಾಲೂಕು ಘಟಕದ ಕಚೇರಿಯಲ್ಲಿ ಸಭೆ ನಡೆಯುತ್ತಿರುವುದು ಸಂತೋಷ ತಂದಿದ್ದೆ. ಮುಂದಿನ ದಿನಗಳಲ್ಲಿ ತಾಲೂಕು ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಶ್ರಮಿಸಲಾಗುವುದು. 12ನೇ ಶತಮಾನದಲ್ಲಿ ಬಸವಣ್ಣ ಅವರು ಸಮಾಜ ಸುದಾರಣೆಗೆ ಜಾಗೃತಿ ಮೂಡಿಸಿದರು. ತಮ್ಮ ವಚನಗಳ ಮೂಲಕ ಅವರು ಇಂದು ಸಹ ಪ್ರಸ್ಥುತವಾಗಿದ್ದಾರೆ. ಬಸವಣ್ಣ ಅವರ ವಚನಗಳನ್ನು ಎಲ್ಲಾ ಭಾಷೆ ತಲುಪಿಸುವ ಕೆಲಸವಾಗಬೇಕು ಎಂದರು.

      ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕೆ.ಇ.ಮಲ್ಲಿಕಾರ್ಜನ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಧ್ಯಕ್ಷ ಎಸ್.ಷಣ್ಮೂಖಪ್ಪ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಉಪಾಧ್ಯಕ್ಷೆ ಮಂಜುಳ ರುದ್ರಪ್ಪ, ಕಾರ್ಯದರ್ಸಿ ನಿರ್ಮಲ ಬಸವರಾಜ, ನಿರ್ದೇಶಕರಾದ ಎಸ್.ಜಿ.ಸುರೇಶ್ ಬಾಬು, ಎಸ್.ಶಿವಪ್ರಕಾಶ್, ಸಿ.ರುದ್ರಪ್ಪ, ಚನ್ನಯ್ಯ, ಚಿನ್ಮಾಯಾನಂದ, ಮುಖಂಡ ಮಹಡಿ ಶಿವಮೂರ್ತಿ, ನಾಗರಾಜ ಸಂಗಮ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link