ಹೊಸದುರ್ಗ:
ತಾಲ್ಲೂಕಿನ ಅಂಚಿಬಾರಿಹಟ್ಟಿ ಗೇಟ್ನ ಹತ್ತಿರ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ನಂ.ಕೆ.ಎ.16-ಡಿ-2378 ನೇ ಲಾರಿಯ ಚಾಲಕ ತನ್ನ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದ ಮಾರುತಿರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಮಾರುತಿರವರು ಮುಂದೆ ಹೋಗುತ್ತಿದ್ದ ಹೊಸ ಪಲ್ಸರ್ ಬೈಕ್ಗೆ ಹಿಂಭಾಗ ದಿಂದ ಡಿಕ್ಕಿ ಹೊಡೆದ ಪರಿಣಾಮ ಸದರಿ ಮೋಟಾರ್ ಸೈಕಲ್ ಚಾಲನೆ ಮಾಡುತ್ತಿದ್ದ ಯಲ್ಲಬೋವಿಹಟ್ಟಿ ಗ್ರಾಮದ ವಾಸಿ ಕಿರಣ(18) ಮತ್ತು ಮೋಟಾರ್ ಸೈಕಲ್ನ ಹಿಂಬದಿಯಲ್ಲಿ ಕುಳಿತಿದ್ದ ಅದೇ ಗ್ರಾಮದ ವಾಸಿ ಮೂರ್ತಿ ರವರು ಮೋಟಾರ್ ಸೈಕಲ್ ಸಮೇತ ಬಿದ್ದು ಕಿರಣರವರು ರಸ್ತೆಯ ಎಡಭಾಗಕ್ಕೆ ಬಿದ್ದಿದ್ದರಿಂದ ಲಾರಿ ಮುಂಭಾಗ ಮತ್ತು ಹಿಂಭಾಗದ ಎರಡು ಚಕ್ರಗಳು ಕಿರಣರವರ ತಲೆಯ ಮೇಲೆ ಹತ್ತಿದ್ದರಿಂದ ಕಿರಣನು ಸ್ಥಳದಲ್ಲಿಯೇ ಮೃತಪಟ್ಟಿ ರುತ್ತಾನೆ . ಮೂರ್ತಿಯು ರಸ್ತೆಯ ಬಲಭಾಗಕ್ಕೆ ಬಿದ್ದಿದ್ದರಿಂದ ತಲೆಗೆ ಮತ್ತು ಮೈಕೈಗೆ ಪೆಟ್ಟು ಬಿದ್ದು ಗಾಯಗಳಾಗಿದ್ದು ಚಿಕಿತ್ಸೆಗಾಗಿ ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಈ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








