ತಿಪಟೂರು :
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದಲ್ಲಿ ಇಂದು ಸಂಜೆ 6 ಗಂಟೆಯಲ್ಲಿ ದ್ವಿಚಕ್ರವಾಹನಕ್ಕೆ ಖಾಸಗಿ ಬಸ್ ಡಿಕ್ಕಿಹೊಡೆದ ಪರಿಣಾಮವಾಗಿ ಸವಾರನ ಎಡಗಾಲು ಸಂಪೂರ್ಣವಾಗಿ ಜಖಂಗೊಡ್ಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಂಜಯ್ಗಾಂಧಿ ದಾಖಲಿಸಲಾಗಿದೆ.
ಹಾಲ್ಕುರಿಕೆ ಗ್ರಾಮದ ಬಸವೇಶ್ವರ ಕಾಲೇಜಿನ ಮುಂಭಾಗದಲ್ಲಿ ಅಪಘಾತ ಸಂಭವಿಸಿದ್ದು, ತಿಪಟೂರಿಗೆ ಆಗಮಿಸುತ್ತಿದ್ದ ಖಾಸಗಿ ಬಸ್ ಕೆ.ಎ 06 ಸಿ 7358 ಮತ್ತು ತಿಪಟೂರಿನಿಂದ ಹಾಲ್ಕುರಿಕೆ ಕಡೆಗೆ ಹೋಗುತ್ತಿದ್ದ ದ್ವಿಚಕ್ರವಾಹನ ಕೆ.ಎ 02 ಹೆಚ್ 7171 ರಲ್ಲಿ ಚಲಿಸುತ್ತಿದ್ದ ನಟರಾಜ್ (30) ಎಂಬ ವ್ಯಕ್ತಿಯ ಎಡಗಾಲು ಸಂಪೂರ್ಣವಾಗಿ ಮುರಿದಿದ್ದು ಅಪಘಾತದಲ್ಲಿ ಗಾಯಗೊಂಡ ನಟರಾಜ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಂಜಯ್ಗಾಂಧಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಪ್ರಕರಣ ಹೊನ್ನವಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.