ಬೆಂಗಳೂರು
ದಿ ಟೈಮ್ ನಿಯತಕಾಲಿಕೆ ಪ್ರಧಾನಿ ನರೇಂದ್ರ ಮೋದಿ ಅವರ ಯೋಗ್ಯತೆಗೆ ಸೂಕ್ತವಾದ ಶೀರ್ಷಿಕೆಯನ್ನು ನೀಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಟೀಕಿಸಿದ್ದಾರೆ.
ತಮ್ಮ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ‘ದಿ ಟೈಮ್’ ನಿಯತಕಾಲಿಕೆಯ ಮುಖಪುಟವನ್ನು ಲಗತ್ತಿಸಿದ್ದಾರೆ.
ಮೋದಿ ಅವರ ದಾಖಲೆಯ ಸುಳ್ಳುಗಳು ಎಂಬ ಶೀರ್ಷಿಕೆಯಲ್ಲಿ ಕೆಲವು ಅಂಶಗಳುಳ್ಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ದಿ ಟೈಮ್ ಮುಖಪುಟದಲ್ಲಿ ‘ಇಂಡಿಯಾಸ್ ಡಿವೈಡರ್ ಇನ್ ಚೀಫ್’ (ಭಾರತದ ಮುಖ್ಯ ವಿಭಜಕ) ಎಂಬ ಶೀರ್ಷಿಕೆಯಿಂದ ಭಾರೀ ಸಂಚಲನ ಸೃಷ್ಟಿಸಿದೆ.
ಪ್ರಧಾನಿ ಮೋದಿ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಎಲ್ಲರೊಂದಿಗೆ ಅಭಿವೃದ್ಧಿ ಎಂಬ ಹೇಳಿಕೆ, ಹೆಣ್ಣು ಮಕ್ಕಳನ್ನು ಶಾಲೆಗೆ ಕರೆ ತರುವ ಭೇಟಿ ಬಚಾವೋ – ಭೇಟಿ ಪಡಾವೋ ಯೋಜನೆ ಸಮರ್ಪಕವಾಗಿ ಜಾರಿ ಮಾಡಿಲ್ಲ, ಎಲ್ಲಾ ರಾಜ್ಯಗಳೊಂ ದಿಗೆ ಸೌಹಾರ್ಯಯುತ ಸಹಕಾರ ನೀಡಿಲ್ಲ ಎಂಬ ಅಂಶಗಳನ್ನು ಪ್ರಸ್ತಾಪಿಸಿ ಟೈಮ್ ನಿಯತಕಾಲಿಕೆ ಸತ್ಯವನ್ನೇ ಹೇಳಿದೆ ಎಂಬ ಅರ್ಥದಲ್ಲಿ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ದಾಖಲೆಗಳ ಪಟ್ಟಿಯನ್ನು ದಿನೇಶ್ ಈ ರೀತಿ ಬರೆದಿದ್ದಾರೆ:
- ಸಬ್ ಕಾ ಸಾತ್ ಸಬ್ ಕಾ ವಿಕಾಸ್ – ಮೋದಿಯ ಸುಳ್ಳು
- ಸಹಕಾರ ಪ್ರಜಾಪ್ರಭುತ್ವ – ಮೋದಿಯ ಸುಳ್ಳು
- ಬೇಟಿ ಬಚಾವೋ ಬೇಟಿ ಪಡಾವೋ – ಮೋದಿಯ ಸುಳ್ಳು
- ಒಂದು ರಾಷ್ಟ್ರ ಒಂದು ತೆರಿಗೆ – ಮೋದಿಯ ಸುಳ್ಳು
- ಟೀಮ್ ಇಂಡಿಯಾ – ಮೋದಿಯ ಸುಳ್ಳು ಹೇಳಿದರು
- 2 ಕೋಟಿ ಉದ್ಯೋಗ ಸೃಷ್ಟಿ – ಮೋದಿ ಸುಳ್ಳು ಹೇಳಿದರು